ಉದಯವಾಹಿನಿ, ಪಾವಗಡ: 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಪಟ್ಟಣದ ಮಹಾತ್ಮಗಾಂಧಿ ತಾಲ್ಲೂಕು ಕ್ರೀಡಾಂಗಣದಲ್ಲಿ ಶಾಸಕ ಹೆಚ್.ವಿ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ತೆರೆದ ವಾಹನದಲ್ಲಿ ಶಾಸಕರು ಪೊಲೀಸ್ ಹಾಗೂ ಶಾಲಾ ಮಕ್ಕಳ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಪೊಲೀಸ್ ಪಡೆ ಹಾಗೂ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನ ತಂಡಗಳಿಂದ ಶಾಸಕರು, ಅಧಿಕಾರಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.
ನಂತರ ಶಾಸಕ ಹೆಚ್.ವಿ.ವೆಂಕಟೇಶ್ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ದೇಶಾಭಿಮಾನ ಹೃದಯಂತರಾಳದಲ್ಲಿ ಮೂಡಬೇಕು. ಪ್ರತಿ ಪ್ರಜೆಯೂ ದೇಶಾಭಿಮಾನ ಮೈಗೂಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯ ದಿನದ ಆಚರಣೆ ಸಾರ್ಥಕವಾಗುತ್ತದೆ’ ಎಂದರು.
‘ದೇಶ ಕಟ್ಟಲು ಹಿರಿಯರು ಮಾಡಿದ ಶ್ರಮ ಸಾರ್ಥಕವಾಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದರು.
ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿ ಸರ್ವರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಡಿ.ಎನ್.ವರದರಾಜು ಮಾತನಾಡಿ, ಭಾರತ ಹೆಮ್ಮೆಯ ರಾಷ್ಟ್ರ. ಕುವೆಂಪುರ ಕವಿತೆಗಳು ದೇಶವನ್ನು ವರ್ಣಿಸಿವೆ. ಅಂಬೇಡ್ಕರ್ ಸಂವಿಧಾನದ ಮೂಲಕ ತಳಮಟ್ಟದವರನ್ನು ಮೇಲೆತ್ತುವ ಕಲ್ಯಾಣ ಕಾರ್ಯ ನೆರವೇರಿಸಿದರು. ಮಕ್ಕಳಲ್ಲಿ ದೇಶಪ್ರೇಮ ಮೂಡಿಸಬೇಕು ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆಯಾಗಿ ದೊರೆತಿಲ್ಲ. ಇದರ ಹಿಂದೆ ಸಾವಿರಾರು ಜನರ ಬಲಿದಾನವಿದೆ. ಆದ ಕಾರಣ ಕೇವಲ ತೋರಿಕೆಗಾಗಿ ಸ್ವಾತಂತ್ರ್ಯ ದಿನ ಆಚರಿಸಬಾರದು ಎಂದು ಕಿವಿಮಾತು ಹೇಳಿದರು.
ಸ್ವಾತಂತ್ರ್ಯ ಸಂಭ್ರಮ ಹಿನ್ನೆಲೆ ವಿದ್ಯಾರ್ಥಿಗಳಿಂದ ನಡೆಸಲಾದ ವಿವಿಧ ಬಗೆಯ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ತಾ.ಪಂ.ಇಒ ಕೆ.ಓ.ಜಾನಕಿ ರಾಮ್, ಬಿಇಒ ಅಶ್ವತ್ಥ ನಾರಾಯಣ, ಪಿಡಬ್ಲ್ಯೂಡಿ ಎಇಇ ಅನಿಲ್ ಕುಮಾರ್, ಪಂ.ರಾ.ಇಂಜಿನಿಯರಿಂಗ್ ಎಇಇ ಸುರೇಶ್.ಟಿ, ಗ್ರಾ.ಕು.ನೈರ್ಮಲ್ಯ ಎಇಇ ಹನುಮಂತಪ್ಪ.ಓ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜಯ್ ಕುಮಾರ್.ಆರ್, ಪೊಲೀಸ್ ಇನ್ಸ್ಪೆಕ್ಟರ್ ಅಜಯ್ ಸಾರಥಿ, ಗಿರೀಶ್, ತಾ.ಪಂ.ಯೋಜನಾಧಿಕಾರಿ ಮಲ್ಲಿಕಾರ್ಜುನ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಶಂಷುದ್ದೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಎ.ಶಂಕರ್ ರೆಡ್ಡಿ, ಪಿ.ಹೆಚ್.ರಾಜೇಶ್, ರವಿ, ಮಹಮ್ಮದ್ ಇಮ್ರಾನ್, ವೆಂಕಟರವಣಪ್ಪ, ಗುಟ್ಟಹಳ್ಳಿ ಅಂಜಿನಪ್ಪ, ಷಾಬಾಬು, ರಿಜ್ವಾನ್ ಉಲ್ಲಾ, ರೈತ ಸಂಘದ ಜಿ.ನರಸಿಂಹರೆಡ್ಡಿ, ಕೃಷ್ಣರಾವ್ ಮತ್ತಿತರರು ಇದ್ದರು.

 

Leave a Reply

Your email address will not be published. Required fields are marked *

error: Content is protected !!