ಉದಯವಾಹಿನಿ, ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದ ಶ್ರೀ ವಿದ್ಯಾ ದರ್ಶನ ನವೋದಯ ಶಾಲೆಯಲ್ಲಿ ಇಂದು ಸ್ವತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ನಾಯಕೋಡಿ ರವರು ಧ್ವಜಾರೋಹಣ ಮಾಡಿ ನಂತರ ಕಾರ್ಯಕ್ರಮವನ್ನ ಉದ್ದೇಶಿಶಿ ಮಾತನಾಡಿದ ಅವರು ಮೊದಲನೆಯದಾಗಿ ಇಂದು ನಾನು ನಮ್ಮ ದೇಶದ 77 ನೇ ಸ್ವಾತಂತ್ರ್ಯ ದಿನದಂದು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಭಾರತ ದೇಶವು ಬ್ರಿಟಿಷರ ಆಳ್ವಿಕೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. 1857 ರಿಂದ 1947 ರವರೆಗೆ ನಿರಂತರ ಹೋರಾಟದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿತು, ಆ ದಿನದಿಂದ ನಾವು ಆಗಸ್ಟ್ 15 ಸ್ವಾತಂತ್ರ ದಿನವನ್ನಾಗಿ ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ. ಆ ಎಲ್ಲ ಮಹಾನ್ ವ್ಯಕ್ತಿಗಳಿಗೆ ನಾನು ನಮಸ್ಕರಿಸುತ್ತೇನೆ. ನಮ್ಮ ದೇಶಕ್ಕೆ ಸುಲಭವಾಗಿ ಸ್ವಾತಂತ್ರ್ಯ ಸಿಗಲಿಲ್ಲ, ಅದಕ್ಕಾಗಿ ನಮ್ಮ ದೇಶದ ಅನೇಕ ಜನರು ಹಲವಾರು ವರ್ಷಗಳ ಕಾಲ ನಿರಂತರವಾಗಿ ಹೋರಾಡಿದರು. ಭಗತ್ ಸಿಂಗ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಮಂಗಲ್ ಪಾಂಡೆ, ಲಾಲಾ ಲಜಪತ್‌ ರಾಯ್ ಮತ್ತು ಇತರ ಅನೇಕ ವೀರರು ನಿರಂತರ ಹೋರಾಡಿ ಸ್ವಾತಂತ್ರ್ಯ ಪಡೆದರು,ಇದಾದ ನಂತರವೂ ಛಲ ಬಿಡದೆ ಹೊಸ ಉತ್ಸಾಹದಿಂದ ಬ್ರಿಟಿಷರನ್ನು ಸೆಳೆದರು. ಅದರ ನಂತರವೇ 15 ಆಗಸ್ಟ್ ರಂದು ನಾವು ನೀವೆಲ್ಲ ಸೇರಿ ಸ್ವಾತಂತ್ರ್ಯ ದಿನವನ್ನಾಗಿ ಆಚರಣೆ ಮಾಡುತ್ತೇವೆ ಎಂದು ಹೇಳಿದರು.ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರ ಪಾತ್ರದಲ್ಲಿ ವಿದ್ಯಾರ್ಥಿಗಳು ಬಹಳ ಆಕರ್ಷಣೆ ಗೊಂಡರುಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೇಮಾ ನಾಯಕೋಡಿ ಸಹ ಶಿಕ್ಷಕರಾದ ಅಷ್ಪಾಕ ಬಾಸಗಿ ವಾಣಿಶ್ರೀ ಪತ್ತಾರ್ ಅಶ್ವಿನಿ ತೇಲಿ ಮೀನಾಕ್ಷಿ ಕೋಳಿ ರೇಖಾ ರಾಮನಗರ ಐಶ್ವರ್ಯ ಜಿಡ್ಡಗಿ ರವಿಕುಮಾರ ಶಿವುರ ಸೈಫನ್ ಅಳ್ಳಗಿ ಮರೆಪ್ಪ ಕರಜಗಿ ಮಹಾದೇವಪ್ಪ ಬಳಗಾರಿ ಸೇರಿದಂತೆ ಪಾಲಕರು ಮುದ್ದು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!