ಉದಯವಾಹಿನಿ, ಮಣಿಪುರ: ಭಯೋತ್ಪಾದಕ ಸಂಘಟನೆ ಮೀಟೆಯ ಎಚ್ಚರಿಕೆಯಿಂದಾಗಿ ಮಣಿಪುರದಲ್ಲಿ ೨೦೦೦ರಲ್ಲಿ ಹಿಂದಿ ಚಿತ್ರಗಳ ಪ್ರದರ್ಶನ ಸ್ಥಗಿತಗೊಂಡಿತ್ತು
ಹೀಗಾಗಿ ಮಣಿಪುರದ ಜನರು ೨೩ ವರ್ಷಗಳ ನಂತರ ಮತ್ತೆ ಬಾಲಿವುಡ್ ಚಲನಚಿತ್ರವನ್ನು ವೀಕ್ಷಿಸಿದರು.
ಉರಿ ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ವೀಕ್ಷಿಸಲು ಜನ ಮುಗಿಬಿದ್ದರು.
ಮಣಿಪುರ ಮೈತೇಯ್ ಬುಡಕಟ್ಟುಗಳ ನಡುವಿನ ಘರ್ಷಣೆಯಿಂದ ತತ್ತರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಂತಿ ಸ್ಥಾಪನೆಗೆ ಕ್ರಮಕೈಗೊಳ್ಳುತ್ತಿದ್ದರೂ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪ್ರದರ್ಶನಗೊಂಡ ಹಿಂದಿ ಚಿತ್ರವೊಂದು ವಿಶೇಷ ಗಮನ ಸೆಳೆಯಿತು. ಎರಡು ದಶಕಗಳ ನಂತರ ಮಣಿಪುರದಲ್ಲಿ ಹಿಂದಿ ಚಿತ್ರವೊಂದು ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು. ಪೀಪಲ್ಸ್ ಲಿಬರೇಶನ್ ಆರ್ಮಿ ಎಂಬ ಉಗ್ರಗಾಮಿ ಸಂಘಟನೆಯ ರಾಜಕೀಯ ವಿಭಾಗವಾದ ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ ೨೦೦೦ನೇ ಇಸವಿಯ ಸೆಪ್ಟೆಂಬರ್‌ನಲ್ಲಿ ಹಿಂದಿ ಚಲನಚಿತ್ರಗಳ ಪ್ರದರ್ಶನದ ವಿರುದ್ಧ ಎಚ್ಚರಿಕೆಯನ್ನು ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಅಲ್ಲಿನ ಜನ ಬಾಲಿವುಡ್ ಸಿನಿಮಾಗಳಿಂದ ದೂರ ಉಳಿದಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ ಉರಿ: ದಿ ಸರ್ಜಿಕಲ್ ಸ್ಟೈಕ್ ಸಿನಿಮಾವನ್ನು ರಾಜಧಾನಿ ಇಂಫಾಲ್‌ನಿಂದ ೬೩ ಕಿಮೀ ದೂರದಲ್ಲಿರುವ ಚುರಾಚಂದ್‌ಪುರ ಜಿಲ್ಲೆಯ ರೆಂಗ್‌ಕೈ ಎಂಬಲ್ಲಿನ ಬಯಲು ರಂಗಮಂದಿರದಲ್ಲಿ ನಿನ್ನೆ ಪ್ರದರ್ಶಿಸಲಾಯಿತು. ಈ ಸಿನಿಮಾ ನೋಡಲು ಜನ ಮುಗಿಬಿದ್ದರು.ಹಮರ್ ಸ್ಪೂಡೆಂಟ್ಸ್ ಅಸೋಸಿಯೇಷನ್ ಚಿತ್ರ ಪ್ರದರ್ಶನ ಏರ್ಪಾಡು ಮಾಡಿದ್ದರು.
