ಉದಯವಾಹಿನಿ, ಹಿಮಾಲಯ : ರಜನೀಕಾಂತ್ ಅಭಿನಯದ ಜೈಲರ್ ದೊಡ್ಡ ಮಟ್ಟದಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ದುಡ್ಡಿನ ಸುರಿಮಳೆಯಾಗುತ್ತಿದೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ರಜನಿ ಹಿಮಾಲಯಕ್ಕೆ ತೆರಳಿದ್ದರು. ಅಲ್ಲಿ ಆಧ್ಯಾತ್ಮಿಕ ಅನ್ವೇಷಣೆ ಜೊತೆಗೆ,ಓದು,ಗ್ರಂಥಗಳ ಅಧ್ಯಯನ,ಧ್ಯಾನ,ಜಪ-ತಪ,ಯೋಗ, ತಿರುಗಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಡುವಿಲ್ಲದ ಚಟುವಟಿಕೆಯಲ್ಲಿ ಭಾಗಿಯಾಗಿರುತ್ತಾರೆ.
ರಜನಿಕಾಂತ್ ಅವರು ಚೆನ್ನೈನಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ತಮ್ಮ ಆತ್ಮೀಯ ಗೆಳೆಯ ಹರಿ ಜೊತೆ ದೆಹಲಿಗೆ ಹೋಗಿ ನಂತರ ರಜನಿಕಾಂತ್ ದೆಹಲಿಯಿಂದ ಉತ್ತರಾಖಂಡದ ನೈನಿತಾಲ್‌ಗೆ ಹೋಗಿ ಅಲ್ಲಿಂದ ಹಿಮಾಲಯದ ಬಾಬಾ ಗುಹೆಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲಿ ರಜನಿ ತನ್ನ ಸ್ನೇಹಿತರ ಜೊತೆ ಶಾಂತ, ಸ್ವಚ್ಛಂದ, ತಿಳಿನೀಲಿ ಆಕಾಶದ ತಳದಲ್ಲಿ , ಪ್ರಕೃತಿ ಮಡಿಲಲ್ಲಿ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.ಅವರು ಆಧ್ಯಾತ್ಮಿಕ ಪರಿಸರದಲ್ಲಿರುವ ಸಮಾಧಿ ದಯಾನಂದ ಸರಸ್ವತಿ ಸಮಾಧಿಗೆ ಭೇಟಿ ನೀಡಿದರು. ರಜನಿಕಾಂತ್ ಹಿಮಾಲಯಕ್ಕೆ ಹೋಗುತ್ತಿರುವುದು ಇದೇ ಮೊದಲಲ್ಲ. ನಾನು ಅನೇಕ ಬಾರಿ ಅಲ್ಲಿಗೆ ಹೋಗಿದ್ದೇನೆ. ಹಿಮಾಲಯಕ್ಕೆ ಹೋದರೆ ಖುಷಿಯಾಗುತ್ತದೆ ,ಹಿಮಾಲಯವೇ ಶಾಂತಿ, ವಿಜಯ ಹಾಗೂ ಸಂತೋಷದ ತಾಣ ಎಂದು ರಜನಿಕಾಂತ್ ಹೇಳಿಕೊಂಡಿದ್ದಾರೆ. ಅಲ್ಲಿ ರಜನೀಕಾಂತ್ ಐಶಾರಾಮಿ ಜೀವನ ತ್ಯಜಿಸಿ ಸರಳವಾಗಿ ಬದುಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!