
ಉದಯವಾಹಿನಿ,ಕೊಲ್ಹಾರ: ಲಕ್ಷಾಂತರ ಸೇನೆಗಳು ಮಾಡಿದ ಅವಿರತವಾಗಿ ಹೋರಾಟದ ತ್ಯಾಗ, ಬಲಿದಾನದ ಫಲವಾಗಿ ಬ್ರಿಟಿಷರು ಕಪಿ ಮುಷ್ಟಿಯಿಂದ ಭವ್ಯ ಭಾರತಕ್ಕೆ ಸ್ವಾತಂತ್ರವನ್ನು ದೊರಕಿಸಿ ಕೊಟ್ಟರು. ತ್ಯಾಗ ಮಾಡಿದ ಮಹನೀಯರಿಗೆ ಗೌರವಾನ್ವಿತವಾಗಿ ಶುಭ ಕೋರುತ್ತಾ. ಮುಂದಿನ ಪೀಳಿಗೆಗೆ ಸ್ವಾತಂತ್ರದ ನಾಡ ಹಬ್ಬವು ಸಮೃದ್ಧಿಯಾಗಲ್ಲಿ ಎಂದು ತಾಲೂಕ ತಶೀಲ್ದಾರ್ ಎಸ್ ಎಸ್ ನಾಯಕಲಮಠ ಹೇಳಿದರು. ಪಟ್ಟಣದ ರಾಣಿ ಚೆನ್ನಮ್ಮ ವೃತ್ತದ ಹತ್ತಿರ ಇರುವ ಎಂಪಿಎಸ್ ಶಾಲಾ ಆವರಣದಲ್ಲಿ 76ನೇ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ತಾಲೂಕು ಆಡಳಿತ ವತಿಯಿಂದ ಸಡಗರ ಸಂಭ್ರಮ ಎಂದು ನೆರವೇರಿಸಿ, ಮಾತನಾಡಿದರು. ಉತ್ತರ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯ ಕೊಲ್ಹಾರವು ಕೆನೆ ಮೊಸರಿಗೆ ಪ್ರಸಿದ್ಧವಾಗಿದೆ, ಇಲ್ಲಿನ ಭೂಮಿಯು ಪಲವತ್ತಾದ ಹೊಂದಿದ್ದು ಮತ್ತು ಕರ್ನಾಟಕದ ಅತ್ಯಂತ ಪ್ರಸಿದ್ಧವಾಗಿರುವ ಉದ್ದ ಸೇತುವೆ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಮುಳವಾಡ ಕೈಗಾರಿಕಾ ಪ್ರದೇಶಗಳಿಗೆ ನಮ್ಮ ತಾಲೂಕು ಕೇಂದ್ರದ ಪ್ರತ್ಯೇಕವಾಗಿದೆ ಎಂದು ಹೇಳಿದರು.
ಧ್ವಜಾರೋಹಣ ಕಾರ್ಯಕ್ರಮ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪತ್ರಕರ್ತರಿಗೆ, ಮತ್ತು ಸಮಾಜ ಸೇವಕರಿಗೆ ತಾಲೂಕು ಆಡಳಿತ ಮಂಡಳಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಪರೀಧಾ ಪಠಾಣ್, ಕೃಷಿ ಇಲಾಖೆ ಅಧಿಕಾರಿ ಫಾತೀಮಾ ಸುತಾರ್, ಆರೋಗ್ಯ ವೈದ್ಯಾಧಿಕಾರಿ ಜೋತ್ಯಿ ತೆಲ್ಲೂರ, ಪಿಎಸ್ಐ ಪ್ರವೀಣ್ ಗೇರಬಾಳ, ಪಟ್ಟಣ ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಮತ್ತು ಪಟ್ಟಣ ಪಂ ಸದಸ್ಯರು, ಕಿತ್ತೂರರಾಣಿ ಚೆನ್ನಮ್ಮ ಶಾಲೆಯ ಸಹ ಶಿಕ್ಷಕರು, ಗುರುಮಾತೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರಾಷ್ಟ್ರಗೀತೆ ಹಾಡುವ ವೇಳೆಯಲ್ಲಿ ವಿದ್ಯುತ್ ವ್ಯವಸ್ಥೆ ಕಡಿತವಾಗಿದ್ದರಿಂದ. ಅಧಿಕಾರಿಗಳು ರಾಷ್ಟ್ರಗೀತೆ ಹಾಡವನ್ನು ಕೆಲ ಕಾಲ ತಡವಾಗಿ ಹಾಡಿದ್ದನ್ನು ಕಂಡು ಪಟ್ಟಣದ ಮುಖಂಡರು ಇಂತಹ ಸಮಯದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಸುವ್ಯವಸ್ಥೆಯಿಂದ ನೋಡಿಕೊಳ್ಳಬೇಕು, ಅಥವಾ ಜನರೇಟರ್ ವ್ಯವಸ್ಥೆ ಮಾಡಬೇಕು, ನಿಮಗೆ ಜವಾಬ್ದಾರಿ ಇಲ್ಲಾ..? ಎಂದು ತಾಲೂಕು ಆಡಳಿತ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು….
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ- ಆರ್ ಬಿ ಪಕಾಲಿ
