ಉದಯವಾಹಿನಿ,ಸಿರುಗುಪ್ಪ : ನಗರದ ಸರ್ಕಾರಿ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣ. ಅಧಿಕಾರಿಗಳಿಗಿಲ್ಲ ಸಾರ್ವಜನಿಕರಿಗೆ ಸ್ಪಂದಿಸುವ ವ್ಯವದಾನ. ಕುಡುಕರು ರಾತ್ರಿ ಹಗಲಲ್ಲು ಮೈಮೇಲೆ ಎಚ್ಚರವಿಲ್ಲದ ಬೀಳುತ್ತಿದ್ದಾರೆ ಸೇವಿಸಿ ಮದ್ಯಪಾನ. ಸಂಜೆಯಾಗುತ್ತಿದ್ದ0ತೆ ಅನೈತಿಕ ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದೆ ಆವರಣ. ಹಲವು ದಿನಗಳಿಂದ ನಡೆಯುತ್ತಿದೆ ಇಲ್ಲಿ ಪದೇ ಪದೇ ಕಳ್ಳತನ ಆದರೂ ಸಾರ್ವಜನಿಕರಿಗಿಲ್ಲ್ಲ ರಕ್ಷಣೆ. ನಿಲ್ದಾಣದಿಂದ ಅರ್ಧ ಕಿ.ಮಿ. ದೂರದಲ್ಲಿ ಖಾಸಗಿ ಬಸ್ ನಿಲ್ಲಬೇಕಾದ ಸರ್ಕಾರಿ ನಿಯಮವಿದ್ದರೂ ಪಾಲಿಸದ ವ್ಯವಸ್ಥಾಪಕರು.
ಪಕ್ಕದಲ್ಲೇ ನಿಲ್ಲಿಸುವ ಖಾಸಗಿ ಬಸ್ ಇನ್ನಿತರ ವಾಹನಗಳ ಮಾಲಿಕರು ಚಾಲಕರು ನಿಲ್ದಾಣದೊಳಗೆ ಹೋಗಿ ಬಳ್ಳಾರಿ, ಆದೋನಿಗೆ ಬನ್ನಿಯೆಂದು ಕರೆತರುವುದನ್ನು ಚಿತ್ರೀಕರಿಸುವ ವೇಳೆ ನಿಯಂತ್ರಣಾಧಿಕಾರಿಗಳು ಅವರನ್ನು ಆತ್ಮೀಯವಾಗಿ ಕಳಿಸುವ ಜಾಣ ಕುರುಡುತನ ಪ್ರದರ್ಶಿಸುವುದು ಕಂಡುಬ0ದಿತು.ಅಲ್ಲಿ ನಿಂತಿರುವ ಖಾಸಗಿ ಬಸ್‌ಗಳು, ಟ್ರಾö್ಯಕ್ಸಿಗಳು ತುಂಬಿಕೊAಡು ಹೋಗುವವರೆಗೂ ಘಟಕದಿಂದ ನಿಲ್ದಾಣಕ್ಕೆ ಬರುವುದಿಲ್ಲ ಈ ಬಗ್ಗೆ ಅವರಲ್ಲಿ ಒಡಂಬಡಿಕೆ ಇರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಹಿತಿ ಕೇಳಲು ಘಟಕಕ್ಕೆ ತೆರಳಿದಾಗ ಕಛೇರಿಯ ಮುಂಭಾಗದ ಆವರಣದೊಳಗೇ ಎಲ್ಲೆಂದರಲ್ಲಿ ತ್ಯಾಜ್ಯ, ತಂಬಾಕು ಉಗುಳಿರುವುದು, ಶೌಚಾಲಯದಲ್ಲಿ ನೀರು ಬಾರದೇ ನಿರುಪಯುಕ್ತ ಕೊಠಡಿಗಳು, ಸುತ್ತಲು ಬೆಳೆದ ವ್ಯರ್ಥ ಹುಲ್ಲು ಇದರಿಂದ ರಾತ್ರಿ ವೇಳೆ ಚಾಲಕ ನಿರ್ವಾಹಕರು ವಿಷ ಜಂತುಗಳಿ0ದ ಅನಾಹುತ ಸಂಭವಿಸಿದರೆ ಯಾರು ಹೊಣೆಯೆಂಬುದನ್ನು ಪ್ರಶ್ನಿಸಿದರೆ ವ್ಯವಸ್ಥಾಪಕರು ಗೊಡ್ಡುಬೆದರಿಕೆ ಹಾಕುತ್ತಿದ್ದಾರೆ. ಪಪ್ಪನಾಳ್ ಗ್ರಾಮದಿಂದ ೧೦೦ಕ್ಕೂ ಅಧಿಕ ವಿದ್ಯಾರ್ಥಿಗಳು, ಪ್ರಯಾಣಿಕರು ಬಂದಿರುವುದನ್ನು ಕಂಡು ಸರ್ಕಾರದ ವ್ಯವಸ್ಥೆಯೇ ಹೀಗಿದೆ ಸಾರಿಗೆ ಪ್ರಶ್ನೆ ಮಾಡಿಯೆಂಬ ಉಡಾಫೆ ಉತ್ತರ ಕೇಳಿಬಂದಿತು.
ಇನ್ನು ಮುಂದಾದರೂ ಈ ಬಗ್ಗೆ ಮೇಲಾಧಿಕಾರಿಗಳು ಗಮನವಹಿಸಬೇಕು ನಾನು ಚಿಕಿತ್ಸೆಗೆ ಬಳ್ಳಾರಿಗೆ ಹೋಗಬೇಕಿದೆ ಎರಡು ತಾಸಿನಿಂದ ಬಸ್ಸಿಲ್ಲವೆಂದು ಮಹಮದ್ ಹಮದುಲ್ಲಾ ಇನ್ನಿತರ ಸಾರ್ವಜನಿಕರು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!