ಉದಯವಾಹಿನಿ, ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ದಿಡೀರ್ ಸುರಿದ ಭಾರಿ ಮಳೆ ಮತ್ತು ಮಳೆ ಸಂಬಂಧಿಸಿದ ಅನಾಹುತದಿಂದ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ ೭೧ಕ್ಕೆ ಏರಿಕೆಯಾಗಿದೆ. ಭೂಕುಸಿತ ಸೇರಿದಂತೆ ಇನ್ನಿತರೆ ಅವಶೇಷಗಳು ಮತ್ತು ಕಟ್ಟಡಗಳಡಿ ಸಿಲುಕಿರುವ ಮಂದಿ ಸೇರಿದಂತೆ ಸಂಕಷ್ಟದಲ್ಲಿ ಸಿಲುಕಿಸಿದ್ದ ೧೭೦೦ ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಓಂಕಾರ್ ಶರ್ಮಾ ತಿಳಿಸಿದ್ದಾರೆ.
ಧಾರಾಕಾರ ಮಳೆ ಮತ್ತು ಮೇಘಸ್ಫೋಟಗಳಿಂದ ಉಂಟಾದ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ೭೧ ಜೀವಗಳನ್ನು ಬಲಿಪಡೆದಿದೆ.ಪಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವುದರಿಂದ ಪ್ರದೇಶಗಳು ಮುಳುಗಿವೆ, ಇದುವರೆಗೆ ೧,೭೦೦ ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದ್ದು ಇನ್ನೂ ರಕ್ಷಣಾ ಪಡೆಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ ಎಂದಿದ್ಧಾರೆ.
ಪೌರಿ ಗರ್ವಾಲ್‌ನಲ್ಲಿ ಪ್ರವಾಸಿ ಶಿಬಿರ, ಭೂಕುಸಿತ ಸಂಭವಿಸಿದ ಅವಶೇಷಗಳಡಿಯಲ್ಲಿ ಹೂತುಹೋಗಿದೆ, ೩ ಶವಗಳು ಪತ್ತೆಯಾಗಿವೆ, ನಾಪತ್ತೆಗಾಗಿರುವ ಮಂದಿಗೆ ಹುಡುಕಾಟ ನಡೆದಿದೆ,ಸಂತ್ರಸ್ತ ನಿವಾಸಿಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ, ಸೇನೆ ಮತ್ತು ಐಎಎಫ್‌ನ ಸಂಯೋಜಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ,
ಶಿಮ್ಲಾದಲ್ಲಿ ಹಲವಾರು ಕಟ್ಟಡಗಳು ಕುಸಿತದ ಅಂಚಿನಲ್ಲಿವೆ. ನಗರಾಭಿವೃದ್ಧಿ ಇಲಾಖೆಯ ಆರು ಅಂತಸ್ತಿನ ಕಟ್ಟಡದ ಹಿಂದೆ ಭೂಕುಸಿತದಿಂದ ನೆಲ ಸಮವಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!