ಉದಯವಾಹಿನಿ, ಇಸ್ಲಾಮಾಬಾದ್: ತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ರಚನೆಯಾದ ಉಸ್ತುವಾರಿ ಸರ್ಕಾರದಲ್ಲಿ ಭಯೋತ್ಪಾದಕನ ಪತ್ನಿಗೆ ಆದ್ಯತೆ ನೀಡಲಾಗಿತ್ತು. ಪಾಕಿಸ್ತಾನದ ಕ್ಯಾಬಿನೆಟ್ ಅವರನ್ನು ಉಸ್ತುವಾರಿ ಪ್ರಧಾನ ಮಂತ್ರಿಯ ಸಲಹೆಗಾರರನ್ನಾಗಿ ಆಯ್ಕೆ ಮಾಡಿದೆ. ಕಿರಿಯ ಸಚಿವ ಸ್ಥಾನಮಾನ ಕೊಡಲಾಗಿದೆ. ಇದರೊಂದಿಗೆ ಈ ಭಯೋತ್ಪಾದಕನ ಪತ್ನಿ ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣದ ಕುರಿತು ಪ್ರಧಾನಿಗೆ ಸಲಹೆ ನೀಡಲಿದ್ದಾರೆ. ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಮುಲ್ಲಿಕ್ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ.
ಏತನ್ಮಧ್ಯೆ, ಯಾಸಿನ್ ಮಲಿಕ್ ಭಯೋತ್ಪಾದನೆಗೆ ಹಣ ನೀಡಿದ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ನ್ಯಾಯಾಲಯವು ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದರೆ,ಎನ್‌ಐಎ ಮರಣದಂಡನೆಗಾಗಿ ವಾದಿಸುತ್ತಿದೆ. ಯಾಸಿನ್ ಮಲಿಕ್ ಈ ಪ್ರಕರಣದ ವಿಚಾರಣೆಗೆ ಇದೇ ತಿಂಗಳ ೯ರಂದು ವಿಡಿಯೋ ಲಿಂಕ್ ಮೂಲಕ ಹಾಜರಾಗಿದ್ದರು. ಮುಶಾಲ್ ಹುಸೇನ್ ಮುಲ್ಲಿಕ್ ಅವರು ೨೦೦೯ ರಲ್ಲಿ ಭಯೋತ್ಪಾದಕ ಯಾಸಿನ್ ಮಲಿಕ್ ಅವರನ್ನು ವಿವಾಹವಾದರು.

Leave a Reply

Your email address will not be published. Required fields are marked *

error: Content is protected !!