
ಉದಯವಾಹಿನಿ ಅಫಜಲಪುರ: ದಲಿತ ಸೇನೆಯ ತಾಲೂಕು ಸಮಿತಿ ವತಿಯಿಂದ ತಾಲೂಕು ಪೊಲೀಸ್ ಠಾಣೆ ಮತ್ತು ದಂಡಧಿಕಾರಿಗಳ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು ನಂತರ ಮಾತನಾಡಿದ ದಲಿತ ಸೇನೆ ತಾಲೂಕು ಅಧ್ಯಕ್ಷರಾದ ಮಹಾಂತೇಶ್ ಬಳುಂಡಗಿ ಅವರು ಮಾತನಾಡಿ ಚಿತ್ರರಂಗದ ನಟರಾದ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಹರೆದಾಡುತ್ತಿರುವ ವಿಡಿಯೋ ಒಂದರಲ್ಲಿ ಊರಿದ್ದಲ್ಲಿ ಒಂದು ಹೋಲಗೇರಿ ಇರುತ್ತದೆ ಎಂದು ವಿಕೃತ ಮನಸ್ಸಿನಿಂದ ಹೇಳಿಕೆಯೊಂದನ್ನು ನೀಡಿರುವುದು ನಾಚಿಕೆಗೆಡಿನ ಸಂಗತಿಯಾಗಿದೆ ಈ ಹೇಳಿಕೆ ರಾಜ್ಯದ, ದಲಿತರಿಗೆ ತುಂಬಾ ನೋವುಂಟಾಗಿದೆ. ಇದನ್ನು ರಾಜ್ಯದ ದಲಿತ ಜನ ವಿರೋದಿಸುತ್ತದೆ.ಇಂತಹ ಹೇಳಿಕೆ ನೀಡುವುದು ಅವಮಾನಕರ, ಹಾಗೂ ಜಾತಿ ನಿಂದನೆಯಿಂದ ಕೂಡಿರುತ್ತದೆ. ಆದ್ದರಿಂದ ಇತನ ಮೇಲೆ ಜಾತಿ ನಿಂದನೆ” ಕೇಸ್ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿಳಂಬವಾದಲ್ಲಿ ಕರ್ನಾಟಕ ರಾಜಾದ್ಯಂತ “ದಲಿತ ಸೇನೆ ಸರಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ,ಎಂದು ಎಚ್ಚರಕೆ ನೀಡಿದರು.ಈ ಸಂದರ್ಭದಲ್ಲಿ ದಲಿತ ಸೇನೆ ತಾಲ್ಲೂಕು ಕಾರ್ಯದಶಿಗಳಾದ ಮಹಾದೇವ ಬಂಕಲಗಿ ಮಡಿವಾಳ ಹೊಸಮನಿ ವಿಜಯಕುಮಾರ್ ಹೊಸಮನಿ ಮಚಂದ್ರು ಬೈರಾಮಡಗಿ ಶ್ರೀಶೈಲ್ ನಾವಿ ಮಹೇಂದ್ರ ವಗ್ಗೆ ಸಂತೋಷ ಸಿಂಗೆ ರವಿ ಕಾಂಬಳೆ ವಿಠ್ಠಲ್ ಇಸ್ಪುರ್ ನಾಗೇಶ್ ಹೊಸಮನಿ ರವಿ ಗೌರ ರವಿ ಸಿಂಗೆ ಪ್ರಭು ರೇವುರ ಗುರು ರೇವುರ ಕುಮಾರ್ ರೇವುರ ವಿದ್ಯಾದರ ಸಂಗಮಕರ್ ಉದಯ ಬೈರಾಮಡಗಿ ನಿಂಗಪ್ಪ ಪಾಟೋಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..
