
ಉದಯವಾಹಿನಿ ದೇವನಹಳ್ಳಿ: ಪದೇ ಪದೇ ವಕೀಲರ ಮೇಲೆ ಹಲ್ಲೇ, ದೌರ್ಜನ್ಯ ಆಗುತ್ತಲೇ ಇದೆ. ಸರಕಾರ ವಕೀಲರ ರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೆಗೊಳಿಸಬೇಕು ಎಂದು ದೇವನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜ್ ತಿಳಿಸಿದರು.ದೇವನಹಳ್ಳಿ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಗುರುವಾರ ಸಂಘದ ಸದಸ್ಯ ವಕೀಲ ಮಹೇಶ್ ಅವರ ಮೇಲೆ ಹೊಸವುಡ್ಯ ಗ್ರಾಮದಲ್ಲಿ ಕೆಲ ಕಿಡಿಗೇಡಿಗಳು ಕ್ಷÄಲ್ಲಕ ಕಾರಣಕ್ಕಾಗಿ ಮಾರಾಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷÄಲ್ಲಕ ಕಾರಣಕ್ಕಾಗಿ ಅವರ ಸ್ವಗ್ರಾಮದಲ್ಲಿ ವಕೀಲ ಮಹೇಶ್ ಅವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದು, ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಈಗಾಗಲೇ 7 ಕಿಡಿಗೇಡಿಗಳ ಪೈಕಿ 3 ಆರೋಪಿಗಳನ್ನು ನ್ಯಾಯಾಲಯ ಬಂಧನಕ್ಕೆ ಬಂದಿಸಲಾಗಿದೆ. ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು. ಇಂದು ನ್ಯಾಯಾಲಯದ ಕಾರ್ಯಕಲಾಪಗಳನ್ನು ಕೈಬಿಡಲಾಗಿದ್ದು, ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ಸಲ್ಲಿಸಬಾರದೆಂದು ಮನವಿ ಮಾಡಲಾಗಿದೆ ಎಂದರು.
ವಕೀಲರ ಮೇಲಿನ ಹಲ್ಲೆಗಳನ್ನು ತಡೆಗಟ್ಟಲು ಸರಕಾರ ರಕ್ಷಣಾ ಕಾಯ್ದೆಯನ್ನು ಜಾರಿ ಮಾಡಿ ಆದೇಶ ಹೊರಡಿಸಬೇಕು. ಕಕ್ಷಿದಾರರ ಪರವಾಗಿ ವಾದ-ವಿವಾದಗಳನ್ನು ಮಾಡುವ ವಕೀಲರ ವೃತ್ತಿಗೆ ರಕ್ಷಣೆ ಬೇಕಿದೆ. ಸಂಘದ ಸದಸ್ಯ ಮಹೇಶ್ ಅವರ ಮೇಲೆ ನಡೆದಂತಹ ಹೀನಾಯ ಕೃತ್ಯ ಖಂಡನೀಯ. ಮುಂದೆ ಈ ರೀತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸುವಂತಾಗಬೇಕು. – ವಕೀಲ ಭೈರೇಗೌಡ | ಹಿರಿಯ ವಕೀಲ
ಇದೇ ಸಂದರ್ಭದಲ್ಲಿ ಹಿರಿಯ ವಕೀಲ ಭೈರೇಗೌಡ, ವಕೀಲರ ಸಂಘದ ಉಪಾಧ್ಯಕ್ಷ ಕೇಶವಮೂರ್ತಿ, ಪ್ರಧಾನಕಾರ್ಯದರ್ಶಿ ಕೃಷ್ಣೋಜಿರಾವ್, ಜಂಟಿ ಕಾರ್ಯದರ್ಶಿ ಮುನೇಗೌಡ, ಖಜಾಂಚಿ ಮಾರೇಗೌಡ, ಯುವ ವಕೀಲರಾದ ಶ್ರೀನಾಥ್, ಅನಿಲ್, ಉಷಾ, ಸಂಘದ ಸದಸ್ಯರು, ಸಹಪಾಟಿ ವಕೀಲರು ಇದ್ದರು.
