
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ರಕ್ತದಾನದಿಂದ ಸಾವಿರಾರು ಜನರ ಜೀವ ಉಳಿಸಲು ಸಹಾಯ ಮಾಡುವ ಕಾರಣ ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಮತ್ತು ರಕ್ತದ ಕ್ಯಾನ್ಸರ್ ಮತ್ತು ಮುಂತಾದ ವಿವಿಧ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ರಕ್ತದಾನ ಸಹಾಯ ಮಾಡುತ್ತದೆ. ಅನೇಕರ ಜೀವ ಉಳಿಸಲು ಸಹಾಯ ಮಾಡುವ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ದಾಸರಹಳ್ಳಿ ಸಮಿಪದ ಸ್ಪರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಬ್ಲಡ್ ಬ್ಯಾಂಕ್ ಅಧ್ಯಕ್ಷ ಲಯನ್ ಎಸ್ ಮನೋಜ್ ಕುಮಾರ್ ಹಾಗೂ ಅತಿಥಿಯ ಸಮಿತಿಯ ಅಧ್ಯಕ್ಷ ಗಿರೀಶ್ ಬುಡರಕಟ್ಟಿ ರವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
‘ರಕ್ತದಾನದಿಂದ ಸಮಾಜಕ್ಕೆ ಕೊಡುಗೆ ನೀಡಲು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಯುವ ಪೀಳಿಗೆ ಹಾಗೂ ದಾನಿಗಳು ರಕ್ತದಾನ ಮಾಡಲು ಮುಂದಾಗಬೇಕಾಗಿದೆ. ರಕ್ತದಾನಿಗಳನ್ನು ಪ್ರೋತ್ಸಾಹಿಸಲು ಹಾಗೂ ರಕ್ತದ ಮಹತ್ವವನ್ನು ತಿಳಿಸಲು ಇಂತಹ ಮಹತ್ವವಾದ ಸಮ್ಮೇಳನವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದರು.
ಕರ್ನಾಟಕ ರಾಜ್ಯ ರಕ್ತ ಚಾಲನ ಪರಿಷತ್ತು ಇಲಾಖೆಯ ಯೋಜನಾ ನಿರ್ದೇಶಕ ನಾಗರಾಜ್ ಎನ್.ಎಂ, ಇಂಡಿಯನ್ ಅಸೋಸಿಯೇಷನ್ ಆಫ್ ಬ್ಲಡ್ ಬ್ಯಾಂಕ್ ಅಧ್ಯಕ್ಷ ಲಯನ್ ಎಸ್ ಮನೋಜ್ ಕುಮಾರ್, ಕರ್ನಾಟಕ ರಾಜ್ಯ ಔಷಧ ನಿಯಂತ್ರಕ ಭಾಗೋಜಿ ಟಿ ಖಾನಾಪುರೆ, ಸ್ಪರ್ಶ ಆಸ್ಪತ್ರೆಯ ನಿರ್ದೇಶಕ ಡಾ. ಶರಣ್ ಪಾಟೀಲ್, ಸ್ಪರ್ಶ ಆಸ್ಪತ್ರೆಯ ಸಿಒಒ ಜೋಸೆಫ್ ಪಸಂಗ, ಹೆಚ್ಚುವರಿ ಯೋಜನಾ ನಿರ್ದೇಶಕ ಡಾ. ರಮೇಶ್ ಚಂದ್ರ ರೆಡ್ಡಿ, ಮಣಿಪಾಲ್ ಆಸ್ಪತ್ರೆಯ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಕನ್ಸಲ್ಟೆಂಟ್ ಡಾ.ಸಿ.ಶಿವರಾಂ, ಸ್ಪರ್ಶ ಆಸ್ಪತ್ರೆಯ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಕನ್ಸಲ್ಟೆಂಟ್ ಡಾ. ಬಾಲ ಭಾಸ್ಕರ್ ಹಾಗೂ ಲಯನ್ ಡಾ. ನಾಗರಾಜ್ ಲಕ್ಷ್ಮೇಶ್ವರ್ ಇದ್ದರು.
