ಉದಯವಾಹಿನಿ, ಶಿಮ್ಲಾ : ಪ್ರವಾಹ, ಭೂಕುಸಿತ ಮತ್ತು ಮೇಘಸ್ಫೋಟಕ್ಕೆ ಕಾರಣವಾಗಿ ನಿರಂತರ ಮಳೆಯಿಂದ ತತ್ತರಿಸಿ ಹೋಗಿರುವ ಹಿಮಾಚಲ ಪ್ರದೇಶ ಸರ್ಕಾರ ,ಇಡೀ ರಾಜ್ಯವನ್ನು ’ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ’ ಎಂದು ಘೋಷಿಸಿದೆ.
“ಮುಂದುವರೆಯುತ್ತಿರುವ ಮುಂಗಾರು ಋತುವಿನಲ್ಲಿ ಹೆಚ್ಚು ಜೀವ ಹಾನಿ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಭಾರಿ ನಷ್ಟಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಾನಿ ಆಗಿರುವ ಹಿನ್ನೆಲೆಯಲ್ಲಿ “ ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ” ಎಂದು ಘೋಷಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಶಿಮ್ಲಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭೂಕುಸಿತದಲ್ಲಿ ೭೫ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವೆಡೆ ರಕ್ಷಣಾ ಕಾರ್ಯ ಸಾಗಿದೆ. ಬೆಟ್ಟ ಗುಡ್ಡದ ತಪ್ಪಲಿನಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದು ಮನೆಗಳು ಕುಸಿಯುವ ಹಂತದಲ್ಲಿವೆ.
“ಪ್ರವಾಹ, ಮೇಘಸ್ಫೋಟ, ಭೂಕುಸಿತ ಮತ್ತು ಇಳಿಜಾರಿನ ವೈಫಲ್ಯಕ್ಕೆ ನಿರಂತರ ಮಳೆಯಿಂದಾಗಿ ಇಡೀ ರಾಜ್ಯ ತೀವ್ರವಾಗಿ ಹಾನಿಗೊಳಗಾಗಿದೆ, ಜೀವ ಮತ್ತು ಆಸ್ತಿಪಾಸ್ತಿಗೆ ಭಾರಿ ನಷ್ಟವಾಗಿದೆ. ಸಾವಿರಾರು ಮನೆಗಳಿಗೆ ಹಾನಿಗೊಳಗಾಗಿವೆ ಬೆಳೆಗಳು ಮತ್ತು ಕೃಷಿ ಭೂಮಿಗೂ ಹಾನಿಯಾಗಿದೆ.
ಭಾರತೀಯ ವಾಯುಪಡೆ, ಸೇನೆ, ಎನ್‌ಡಿಆರೆಫ್, ಎಸ್‌ಡಿಆರೆಫ್, ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ಸೇವೆಗಳು ಮತ್ತು ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ಸಾವಿರಾರು ಪ್ರವಾಸಿಗರು ಮತ್ತು ಸ್ಥಳೀಯ ಜನರನ್ನು ಸ್ಥಳಾಂತರಿಸಿದ್ದು ಅದರ ಕಾರ್ಯ ಇನ್ನೂ ಮುಂದುವರಿದೆ.
