
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ವಿದ್ಯುತ್ ಪರಿವರ್ತಕಗಳು,ತಂತಿಗಳು,ಕಂಬಗಳ ದುರಸ್ತಿ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ 1.5ಕೋಟಿ ಅನುದಾನ ಬಿಡುಗಡೆ ಆಗಿದೆ ಸಾರ್ವಜನಿಕರ ಗ್ರಾಹಕರ ವಿದ್ಯುತ್ ಗೆ ಸಂಭಂಧಿಸಿದ ಸಮಸ್ಯೆಗಳು ಶ್ರೀಘ್ರದಲ್ಲೆ ಪರಿಹರಿಸಲಾಗುವುದು ಎಂದು ಜೇಸ್ಕಾಂ ಎಇಇ ಸುರೇಶ ಬಾಬು ಹೇಳಿದರು.
ಪಟ್ಟಣದ ಚಂದಾಪೂರದ ಜೇಸ್ಕಾಂ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು,ಈಗಾಗಲೇ ಕಳೆದ ತಿಂಗಳು ಹಮ್ಮಿಕೊಂಡಿದ್ದ ಸಭೆಯಲ್ಲಿ 6ಸಮಸ್ಯೆಗಳ ದೂರುಗಳು ಬಂದಿದ್ದವು ಅದರಲ್ಲಿ 4ಸಮಸ್ಯೆಯಗಳು ಪರಿಹರಿಸಿದ್ದು 2ಸಮಸ್ಯೆಗಳ ಕೆಲಸ ಪ್ರಗತಿಯಲ್ಲಿದೆ. ಸದ್ಯದ ಸಭೆಯಲ್ಲಿ 13ಸಮಸ್ಯೆಗಳ ದೂರುಗಳು ಬಂದಿವೆ ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದರು. ಗ್ರಾಹಕ ಸೂರ್ಯಕಾಂತ ಪಾಟೀಲ ಮಾತನಾಡಿ ಪಟ್ಟಣದ ಮುಲ್ಲಾಮಾರಿ ನದಿಯ ನೂತನ ಬ್ರೀಡ್ಜ್ ಹತ್ತಿರ ನೂತನ ವಿದ್ಯುತ್ ಪರಿವರ್ತಕ ಅಳವಡಿಸಿದ್ದು ಕಾಮಗಾರಿ ಕಳಪೆಮಟ್ಟದಿಂದ ಮಾಡಿದ್ದು ಕೇಬಲ್ ಅವಶ್ಯಕ ವಸ್ತುಗಳು ಸುಟ್ಟು ಹೋಗಿರುವುದರಿಂದ ರೈತರಿಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದರು.ರಮೇಶ ವಾರ್ಕರ ಮಾತನಾಡಿ ಅಣವಾರ ಗ್ರಾಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೂಡಿಸಿದ ವಿದ್ಯುತ್ ಪರಿವರ್ತಕವನ್ನು ಕಳ್ಳತನವಾಗಿರುವುದರಿಂದ ಸುತ್ತಮುತ್ತಲಿನ ರೈತರಿಗೆ ವಿದ್ಯುಚ್ಛಕ್ತಿಯ ತೊಂದರೆ ಆಗುತ್ತಿದೆ ಆದಷ್ಟು ಬೇಗ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು. ಉಲ್ಲಾಸಕುಮಾರ ಕೇರೋಳ್ಳಿ ಮಾತನಾಡಿ ಬೆಳ್ಳಿ ಬೆಳಕು ಕಾಲೋನಿ ಹಾಗೂ ಆಶ್ರಯ ಕಾಲೋನಿಯಲ್ಲಿ ತಂತಿಗಳು ಜೋತು ಬಿದ್ದಿವೆ ಹಾಗೂ ವಿದ್ಯುತ್ ಕಂಬಗಳು ಮಧ್ಯೆ ರಸ್ತೆಯಲ್ಲಿಯೇ ಇದರಿಂದ ಅಪಾಯ ಇರುವುದರಿಂದ ಶೀಘ್ರದಲ್ಲೇ ದುರಸ್ತಿ ಮಾಡಿ ಕಂಬಗಳು ಸ್ಥಳಾಂತರ ಮಾಡಬೇಕು,ವಿದ್ಯುತ್ ಪರಿವರ್ತಕ ಸುತ್ತಲೂ ಜಾಲಿ ಮಾಡಬೇಕು ಎಂದರು.
ವೀರಶೇಟ್ಟಿ ಪಾಟೀಲ್ ಮಾತನಾಡಿ ಅಣವಾರ ಗ್ರಾಮದ ಹೊಸ ಬಡಾವಣೆಯಲ್ಲಿ 25ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿದ್ದು ಅಲ್ಲಿನ ಎಲ್ಲಾ ಮನೆಗಳ ವಿದ್ಯುತ್ ಸಂಪರ್ಕ ಕಲ್ಪಿಸಲು ನೂತನ ಕಂಬಗಳು ಅಳವಡಿಸಬೇಕು ಎಂದರು. ಗ್ರಾಹಕರು ಆಗಮಿಸಿ ಒಂದೊಂದು ಸಮಸ್ಯೆಗಳು ಅಧಿಕಾರಿಗಳ ಎದುರು ತೊಡಿಕೊಂಡರು.ಈ ಸಂದರ್ಭದಲ್ಲಿ ಎಸ್ಓ ಮೋಹನ್ ರಾಠೋಡ್,ರಾಜಕುಮಾರ,ಅಬ್ದುಲ್ ರಹೀಂ,ಲಾವಣ್ಯ,ಆನಂದ,ನಂದಕುಮಾರ ಪಾಟೀಲ ಪೋಲಕಪಳ್ಳಿ,ಶ್ರೀಕಾಂತ ಜಾನಕಿ,ಡಾ.ರೇವಣಸಿದ್ದಪ್ಪ,ನಾಗು ಮಲಕೂಡ,ಶಿವನಂದಸ್ವಾಮಿ ಸುಲೇಪೇಟ,ತುಳಸಿರಾಮ ಪೋಳ್,ಮಸ್ತಾನ ಅಲಿ,ಅನೇಕರಿದ್ದರು.
175ಕಂಬಗಳು,50ವಿದ್ಯುತ್ ಪರಿವರ್ತಕಗಳು ದುರಸ್ತಿ ಕಾರ್ಯ ಮಾಡಿದ್ದು; ಜೇಸ್ಕಾಂ ಎಸ್ಓ ರಾಠೋಡ್
ಚಿಂಚೋಳಿ: ತಾಲ್ಲೂಕಿನಾದ್ಯಂತ ಈಗಾಗಲೇ 175ಕ್ಕೂ ಹೆಚ್ಚು ಕಂಬ ಹಾಗೂ 50ವಿದ್ಯುತ್ ಪರಿವರ್ತಕಗಳು ದುರಸ್ತಿಕಾರ್ಯ ಕೈಗೊಳ್ಳಲಾಗಿದೆ.
ತಾಲ್ಲೂಕಿನಲ್ಲಿ ಈಗಾಗಲೇ 30-40ವಿದ್ಯುತ್ ಪರಿವರ್ತಕಗಳಲ್ಲಿನ ಕೆಮಿಕಲ್ ಯಾರೊ ಕಳ್ಳತನ ಮಾಡುತ್ತಿದ್ದಾರೆ ಈಗಾಗಲೇ ಕುಂಚಾವರಂ ವ್ಯಾಪ್ತಿಯಲ್ಲಿ 3ಬಾರಿ ಪ್ರಕರಣ ದಾಖಲಿಸಿದ್ದೇವೆ,ವಿದ್ಯುತ್ ಪರಿವರ್ತಕಗಳಲ್ಲಿನ ಕೆಮಿಕಲ್ ಕಳ್ಳತನ ಆಗುತ್ತಿರುವುದರಿಂದ ಇಲಾಖೆಗೆ ನಷ್ಟ ಆಗುವುದಲ್ಲದೆ ಜನರಿಗೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ತೊಂದರೆಯಾಗುತ್ತಿದೆ.
ಸಭೆಯಲ್ಲಿ ಗ್ರಾಹಕರು ಆಗಮಿಸಿ ಹೇಳಿರುವ ಎಲ್ಲಾ ಸಮಸ್ಯೆಗಳಿಗೆ ಒಂದು ವಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಪರಿಹರಿಸಲಾಗುವುದು ಕೆಲವೊಂದ್ದು ಸಮಸ್ಯೆಗಳು 15ದಿನಗಳಲ್ಲಿ ಬಗೆಹರಿಸಲಾಗುವುದು.
– ಮೋಹನ್ ರಾಠೋಡ್ ಜೇಸ್ಕಾಂ ಎಸ್ಓ ಚಿಂಚೋಳಿ.
