ಉದಯವಾಹಿನಿ ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ ೫ ಹೆಚ್.ಪಿ ನೀರೆತ್ತುವ ಮೋನೋಬ್ಲಾಕ್ ಲೂಬಿ ಕಂಪನಿಯ ಮೋಟಾರ್ ಪಂಪಸೆಟ್‌ಗಳು ಕಳುವಾಗಿದ್ದಾವೆ ಎಂದು ಜೆಡೆಪ್ಪ ತಂದೆ ಲೇಟ್ ಯಂಕಪ್ಪ ಸಿರಿಗೇರಿ ಠಾಣೆಗೆ ದೂರು ನೀಡಿರುತ್ತಾರೆ.ದೂರಿನ್ವಯ ಗುನ್ನೆ ನಂ ೯೯/೨೦೨೩ ಕಲಂ:೩೭೯ ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ರಂಜೀತ್ ಕುಮಾರ್ ಬಂಡಾರು ಪೋಲೀಸ್ ಅಧೀಕ್ಷಕರು,ಎಂ.ಎ.ನಟರಾಜ್ ಹೆಚ್ಚುವರಿ ಪೋಲೀಸ್ ಅಧೀಕ್ಷಕರು, ವೆಂಕಟೇಶ್ ಡಿವೈಎಸ್ಪಿ, ಸಿರುಗುಪ್ಪ ಮತ್ತು ತೆಕ್ಕಲಕೋಟೆಯ ಸಿಪಿಐ ಸುಂದರೇಶ್ ಇವರ ಮಾರ್ಗದರ್ಶನದಲ್ಲಿ ಸಿರಿಗೇರಿ ಠಾಣೆಯ ಪಿಎಸ್‌ಐ ಸದ್ದಾಂ ಹುಸೇನ್.ಹೆಚ್.ನೇತೃತ್ವದಲ್ಲಿ ತಂಡ ರಚಿಸಿದ್ದು ಶುಕ್ರವಾರ ಪ್ರಕರಣವನ್ನು ಬೇಧಿಸಿ ಆರೋಪಿಗಳಾದ ಸಿರಿಗೇರಿ ಗ್ರಾಮದ ನಿವಾಸಿಗಳಾದ ಕೆ.ಮಾರುತಿ ತಂದೆ ಕೆ.ಅಂಜಿನಪ್ಪ,ಕರಿಬಸವ.ಬಿ ತಂದೆ ಪಂಪಣ್ಣ.ಬಿ ವಶಕ್ಕೆ ಪಡೆದು ಆರೋಪಿಗಳಿಂದ ೫ ವಿವಿಧ ಕಂಪನಿಯ ಮೋಟಾರ್ ಪಂಪಸೆಟ್‌ಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ.ಇವುಗಳ ಅಂದಾಜು ಮೊತ್ತ ೧ ಲಕ್ಷ ಇಪ್ಪತ್ತೆöÊದು ಸಾವಿರ ರುಪಾಯಿಗಳಾಗಿರುತ್ತದೆ.ಕಳುವಾದ ಮಾಲನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಳ್ಳಾರಿ ಜಿಲ್ಲಾ ಎಸ್‌ಪಿ ಶಾಘಿಸಿದ್ದಾರೆ.
