ಉದಯವಾಹಿನಿ ಇಂಡಿ : ನನ್ನ ಮಣ್ಣು, ನನ್ನ ದೇಶ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ನಮನ  ಮಣ್ಣಿಗಾಗಿ, ದೇಶಕ್ಕಾಗಿ ಭಾರತದ ಹಲವಾರು ಮಹಾನ್ ನಾಯಕರು ಹೋರಾಟದ ಫಲವಾಗಿ ನಾವುಗಳು ಅವರನ್ನು ನಮಿಸುವದರ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು *ತಾಲೂಕ ಪಂಚಾಯತಿ ಇಓ ಸುನೀಲ ಮದ್ದಿನ* ಕರೆ ನೀಡಿದರು.ತಾಲೂಕ ಪಂಚಾಯತ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಹಯೋಗದಲ್ಲಿ ಏರ್ಪಡಿಸಿದ್ದ *ನನ್ನ ಮಣ್ಣು, ನನ್ನ ದೇಶ* ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ದೇಶವು ವಿಶ್ವಕ್ಕೆ ಮಾದರಿಯಾದ ದೇಶವಾಗಿದೆ. ಸ್ವಾತಂತ್ರ್ಯ ದೊರಕುವ ಸಂದರ್ಭದಲ್ಲಿ ಅನೇಕ ಮಹಾನ್ ಹೋರಾಟಗಾರರು, ಯೋಧರು ದೇಶದ ಮಣ್ಣಿಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದಾರೆ. ಈ ದಿಸೆಯಲ್ಲಿ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ಗತಿಸಿದ ಪ್ರಯುಕ್ತ ಸವಿ ನೆನಪಿಗಾಗಿ ಪ್ರತಿ ಗ್ರಾ.ಪಂಯಿಂದ ಮಣ್ಣು ಸಂಗ್ರಹಣೆ ಮಾಡಿ ತಾಲೂಕ ಹಂತದಲ್ಲಿ ದೆಹಲಿಗೆ ತಲುಪಿಸಲಾಗುತ್ತದೆ. ಹುಟ್ಟಿದ ಪ್ರತಿಯೊಬ್ಬರು ನಾನು ದೇಶಕ್ಕಾಗಿ ಏನು ಮಾಡಿದೆ ಎಂಬುದು ಮುಖ್ಯವಾಗಿದೆ ಎಂದರು. ಅವರು “ಅಮೃತ ಕಳಸ”ಕ್ಕೆ 38  ಗ್ರಾಮ ಪಂಚಾಯತಿಗಳ ಮಣ್ಣನ್ನು ಹಾಕಿ ಕಳಸವನ್ನು ನೆಹರು ಯುವಕೇಂದ್ರದ ಸ್ವಯಂ ಸೇವಕರಾದ *ಸ್ಮಿತಾ ರೋಡಗಿ* ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ವ್ಯವಸ್ಥಾಪಕ  ಎಂ. ವಿ. ನಾರಾಯಣಪುರ, ಐಇಸಿ ಸಂಯೋಜಕಿ ಡಾ. ಜ್ಞಾನಜ್ಯೋತಿ ಚಾಂದಕವಠೆ, ಜಿ. ಕೆ. ಲಾಳಸೆರಿ, ಆಡಳಿತ ಸಹಾಯಕ ಪ್ರದೀಪ ಹಿಳ್ಳಿ, ಹನುಮಂತ ಮೇಟಿ, ವಿವಿಧ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, *”ಅಮೃತ ಕಳಸಕ್ಕೆ”* ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!