
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಕಮ್ಮಗೊಂಡನಹಳ್ಳಿಯ ಸಿಎಸ್ಐ ಕೃಪಾಲಯಾ ಚರ್ಚ್ ದಿಂದ ಕ್ರೈಸ್ತ ಧರ್ಮದ ಫಾದರ್ ಅರುಣ್,ಬ್ರದರ್ ಸ್ಟೀಫನ್ ಇವರುಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು.ಕ್ರೈಸ್ತ ಧರ್ಮದ ಮುಖಂಡ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಮೇಣದ ಬತ್ತಿ ಹಿಡಿದು ರಾಜ ಬೀದಿಯಲ್ಲಿ ಕೇಂದ್ರ ಸರ್ಕಾರದ ಮಣಿಪುರ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ಬೃಹತ್ ಪ್ರತಿಭಟನೆ ರ‍್ಯಾಲಿ ನಡೆಯಿತು.ಇಲ್ಲಿವರೆಗೆ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಕ್ರೂರ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರದಾನಿ ಮೋದಿ ,ಗ್ರಹ ಸಚಿವ ಅಮಿತ್ ಷಾ ಚಕಾರ ಎತ್ತುತ್ತಿಲ್ಲ ಇವರಿಗೆ ಕಣ್ಣು ಕಿವಿ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತ ಆಗ್ರಹಿಸಿದರು.ಕೇಂದ್ರ ಸರ್ಕಾರ ಮತ್ತು ಮಣಿಪುರ ಸರ್ಕಾರ ಶೀಘ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಅತ್ಯಾಚಾರ ಹಾಗೂ ಹಿಂಸಾಚಾರಕ್ಕೆ ಬಲಿಯಾಗಿದ ಮಣಿಪುರ ಕ್ರೈಸ್ತ ಸಮುದಾಯಕ್ಕೆ ರಕ್ಷಣೆ ನೀಡಬೇಕು ಘಟನೆಗೆ ಕಾರಣರಾದ ಕಿಡಿಗೇಡಿಗಳಿಗೆ ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಕಮ್ಮಗೊಂಡನಹಳ್ಳಿ ಕ್ರೈಸ್ತ ಸಮುದಾಯ ಮುಖಂಡ ಬ್ರದರ್ ಸ್ಟೀಫನ್ ಒತ್ತಾಯಿಸಿ ಕಮ್ಮಗೊಂಡನಹಳ್ಳಿಯ, ಅಬ್ಬಿಗೆರೆ ಮುಖ್ಯ ರಸ್ತೆ ಮೂಲಕ ಜಾಥಾ ನಡೆಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಬ್ರದರ್ ಸ್ಟೀಫನ್ ಅವರು ಮಾತನಾಡಿದರು. ಕ್ರೈಸ್ತ ಧರ್ಮ ಫಾದರ್ ಅರುಣ್ ಸೇರಿದಂತೆ ಸಮುದಾಯದ ಮುಖಂಡರು ಮಾತನಾಡಿದರು.ಈ ಸಂದರ್ಭದಲ್ಲಿ ಕ್ರೆಸ್ತ ಧರ್ಮದ ಮುಖಂಡರಾದ ರೇವ್ ಎಲಿಷಾ ದೇವಾನಂದಮ್,ರೇವ್ ಡೇನಿಯಲ್ ಡೆಸರ್,ಬಿಷಪ್ ಡೇವಿಡ್,ಡಾ.ಎನ್.ಎಸ್.ಅರುಣ್ ಕುಮಾರ್,ರೇವ್ ಜಿ.ವೈ ವಿಜಯಕುಮಾರ್ ಸ್ಯಾಮ್,ವೈ ಸ್ಯಾಮ್ಯುಯೆಲ್,ರೇವ್ ಜಾನ್ಸ್ ನ್ ಸೇರಿದಂತೆ ಮಹಿಳೆಯರು ಯುವಕರು ಯುವತಿಯರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
