ಉದಯವಾಹಿನಿ ತಾಳಿಕೋಟಿ: ಯಾವುದೇ ಒಂದು ಸಮಾಜ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಆ ಸಮಾಜದ ಜನರ ಮಧ್ಯೆ ಒಗ್ಗಟ್ಟು ಇರಬೇಕು ಅಸಂಘಟಿತವಾದ ಸಮಾಜದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಮುಖಂಡ ಡಾ. ಬಸವರಾಜ್ ಅಸ್ಕಿ ಕೊಣ್ಣೂರ್ ಹೇಳಿದರು. ಇತ್ತೀಚಿಗೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಇವರು ಹಮ್ಮಿಕೊಂಡ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು. ಈ ವಾಣಿಜ್ಯ ಮಳಿಗೆಗಳಿಂದ ಸಮಾಜಕ್ಕೆ ಒಂದು ಆದಾಯವಾಗುತ್ತದೆ ಇದರ ನಿರ್ಮಾಣದಲ್ಲಿ ನಾನು ನನ್ನಿಂದ ಆದಷ್ಟು ಆರ್ಥಿಕ ಸಹಾಯ ಮಾಡಿದ್ದೇನೆ ನಾನು ಸದಾ ನಿಮ್ಮೊಂದಿಗಿದ್ದೇನೆ ಮುಸ್ಲಿಂ ಬಾಂಧವರು ತಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ವಿದ್ಯಾವಂತರಾಗಿ ಮಾಡಬೇಕು ಶಿಕ್ಷಣದಿಂದಲೇ ಸಮಾಜದ ಏಳಿಗೆ ಸಾಧ್ಯ ಎಂದು ತಿಳಿಸಿದರು. ನಿವೃತ್ತ ಶಿಕ್ಷಕ ಲಾಳೆಮಶಾಕ್ ಮಡಿಕೇಶ್ವರ ಮಾತನಾಡಿ ಹಣಕಾಸಿನ ತೊಂದರೆಯಿಂದ ಮಳಿಗೆ ಕಾರ್ಯ ವಿಳಂಬವಾಗಿತ್ತು ಡಾ. ಬಸವರಾಜ್ ಅಸ್ಕಿ ಅವರು ವೈಯಕ್ತಿಕವಾಗಿ ಸಹಾಯ ಮಾಡಿರುವುದರಿಂದ ಈ ಕೆಲಸ ಪೂರ್ತಿಗೊಳಿಸಲು ಸಾಧ್ಯವಾಯಿತು ಅವರ ಸಹಕಾರ ಸದಾ ನಮ್ಮ ಸಮಾಜದೊಂದಿಗೆ ಇದೆ ಎಂದರು. ಇದೇ ಸಂದರ್ಭದಲ್ಲಿ ಡಾ. ಬಸವರಾಜ ಅಸ್ಕಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಂಜುಮನ್ ಇಸ್ಲಾಂ ಕಮಿಟಿ ಛೇರ್ಮನ್ ಬಂದೇನವಾಸ್ ಕಡಕೋಳ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಮಯದಲ್ಲಿ ಗ್ರಾಪಂ ಅಧ್ಯಕ್ಷರಾದ ರೇಣುಕಾ ಮಾದರ. ಉಪಾಧ್ಯಕ್ಷ ಸಾಹೇಬಲಾಲ ಟಕ್ಕಳಕಿ. ಅಂಜುಮನ್ ಇಸ್ಲಾಂ ಕಮಿಟಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ ಅವಟಿ ಕಾರ್ಯದರ್ಶಿ ನಜೀರ್ ಅಹ್ಮದ್ ಸಾಲಿ ಖಜಾಂಚಿ ದಾವಲ್ ಸಾಬ್ ಮಡಿಕೆಶ್ವರ್ ಅಂಜುಮನ್ ಕಮಿಟಿ ಸರ್ವ ಸದಸ್ಯರು ಹಾಗೂ ಗ್ರಾಮದ ಗಣ್ಯರು ಇದ್ದರು. ಬಾಬು ಸಾಲಿ ಕುರಾನ್ ಪಟಿಸಿದರು ಅಹಮದ್ನಾಜ್ ಸಾಲಿ ನಾಥ್ ಹಾಡಿದರು . ಶಿಕ್ಷಕ ಮೊಹಮ್ಮದ್ ರಫೀಕ್ ಕಡಕೋಳ ಕಾರ್ಯಕ್ರಮ ನಿರುಪಿಸಿ ವಂದಿಸಿದರು.
