ಉದಯವಾಹಿನಿ ಹೊಸಕೋಟೆ : ಜನರಲ್ಲಿ ಭಕ್ತಿ ಭಾವನೆ ಸಂಪ್ರದಾಯ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು. ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರ ಪೂಜೆ ಮಾಡಿದರೆ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂದು ಪ್ರತಿಭಾ ಶರತ್ ಬಚ್ಚೇಗೌಡ ಹೇಳಿದರು.ತಾಲೂಕಿನ ತಾವರೆಕೆರೆ ಗ್ರಾಪಂ. ವ್ಯಾಪ್ತಿಯ ಮಂಚಪ್ಪನಹಳ್ಳಿಯ ಶ್ರೀ ಗಂಗಮ್ಮದೇವಿ ದೇವಾಲಯ ಶಿಲಾ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಶ ಕುಂಭಾಭಿಷೇಕ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಪುಣ್ಯ ಕ್ಷೇತ್ರಗಳ ದರ್ಶನ ಪಡೆದರೆ, ಮನುಷ್ಯನು ಜೀವನ ಸಕಾರತ್ಮವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ದುಷ್ಟ ಶಕ್ತಿಗಳು ಬಾರದಂತೆ ಗ್ರಾಮಗಳಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲೆಂದು ಪ್ರತಿ ಗ್ರಾಮದಲ್ಲೂ ದೇವಸ್ಥಾನಗಳು ಕಟ್ಟಿಸಿ ಪ್ರತಿ ನಿತ್ಯ ಪೂಜೆ ಸಲ್ಲಿಸುವ ಸಂಪ್ರದಾಯ ಹಿಂದೂ ಧರ್ಮದಲ್ಲಿ ನಡೆದು ಬಂದಿದೆ. ಗ್ರಾಮಸ್ಥರು ಒಟ್ಟಾಗಿ ಸೇರಿ ಇಂತಹ ದೇವರ ಕಾರ್ಯಕ್ರಮಗಳಲ್ಲಿ ಸೇರುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸದ ಜೊತೆಗೆ ಸಂಬ0ಧಗಳು ಬೆಸೆಯುತ್ತವೆ. ಮಂಚಪ್ಪನಹಳ್ಳಿ ಗ್ರಾಮಸ್ಥರು ದಾನಿಗಳ ನೆರವಿನಿಂದ ದೇವಾಲಯ ಕಟ್ಟಿಸಿ ಜೀರ್ಣೋದ್ಧಾರ ಮಾಡಿದ್ದಾರೆ. ದೇವಸ್ಥಾನ ಕಟ್ಟಿದರೆ ಸಾಲದು ಪ್ರತಿನಿತ್ಯ ತಪ್ಪದೇ ಪೂಜಾ ಕಾರ್ಯಗಳು ನಡೆಸಬೇಕಾದ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ ಎಂದರು.ಇದೇ ಸಂದರ್ಭದಲ್ಲಿ ಬಂದAತಹ ಎಲ್ಲ ಭಕ್ತಾದಿಗಳಿಗೂ ಅನ್ನದಾಸೋಹ ಏರ್ಪಡಿಸಿದ್ದರು.ಕಾರ್ಯಕ್ರಮದಲ್ಲಿ ತಾಪಂನ ಅಧ್ಯಕ್ಷ ಟಿ.ಎಸ್. ರಾಜಶೇಖರ್, ಗ್ರಾಪಂನ ಅಧ್ಯಕ್ಷ ಎನ್. ರಮೇಶ್, ಉಪಾಧ್ಯಕ್ಷೆ ಅಸ್ಮಾತಾಜ್ ಜಿಯಾಉಲ್ಲಾ, ಮಾಜಿ ಅಧ್ಯಕ್ಷರಾದ ಆರ್.ರವಿಕುಮಾರ್, ಎಸ್‌ಎಚ್‌ಟಿ ಮಂಜುನಾಥ್, ಮಾಜಿ ಉಪಾಧ್ಯಕ್ಷ ಎಸ್.ಸುಧಾಕರ್, ಗ್ರಾಪಂನ ಸದಸ್ಯರಾದ ಪ್ರಿಯಾಂಕ ಡಿ.ರಮೇಶ್, ಮಾಜಿ ಸದಸ್ಯ ದಂಡಪ್ಪ ಹಾಗೂ ಮಂಚಪ್ಪನಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.
