
ಉದಯವಾಹಿನಿ ಕುಶಾಲನಗರ: ಕುಶಾಲನಗರ ತಾಲ್ಲೋಕಿನ ಹೆಬ್ಬಾಲೆ ಗ್ರಾಮದಲ್ಲಿ ಭಾರತ ಸರ್ಕಾರದ ಕೈಮಗ್ಗ ನೇಕಾರರು ಮತ್ತು ಸಂಘಟನೆಯ ವತಿಯಿಂದ ಹೆಬ್ಬಾಲೆಯ ಹಾಲಿನ ಡೈರಿಯ ಮೇಲ್ಭಾಗದಲ್ಲಿರುವ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಸಮರ್ಥ ಯೋಜನೆ ಅಡಿ ಕೈ ಮಗ್ಗದಲ್ಲಿ ನೇಯುವ ಕಾರ್ಯಕ್ರಮವನ್ನು ಮಹಿಳೆಯರಿಗಾಗಿ ಇಂದು ಚಾಲನೆ ನೀಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅರುಣ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ರಾಜ್ಯ ದ ಹ್ಯಾಂಡ್ಲೂಮ್ ನೇಕಾರರ ಅಭಿವೃದ್ಧಿ ಅಧಿಕಾರಿ ತುಳಸಿರಾಮ್ ಮತ್ತು ಕೇಂದ್ರ ದ ಅಭಿವೃದ್ಧಿ ಅಧಿಕಾರಿ ಮಾರಿ ಮುತ್ತು ಹಾಗೂ ಹ್ಯಾಂಡ್ಲೂಮ್ ಟೆಕ್ಸ್ ಟೈಲ್ಸ್ ನ ಜಿಲ್ಲಾ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಜಿ.ಎಸ್. ಮತ್ತು ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ವೆಂಕಟೇಶ್ ಮತ್ತು ಕಾರ್ಯದರ್ಶಿ ಸವಿತಾ ಹಾಜರಿದ್ದರು 30 ಮಂದಿ ಮಹಿಳೆಯರು ಇಂದಿನಿಂದ ತರಬೇತಿ ಪಡೆಯಲು ಹಾಜರಾಗಿದ್ದರು.
