
ಉದಯವಾಹಿನಿ ಗದಗ: ಹಾವೇರಿ ಗದಗ ಲೋಕಸಭಾ ಆಕಾಂಕ್ಷಿ ಪಾದಯಾತ್ರೆಯಿಂದ ಬೆಂಚಿ ಆಂಜನೇಯ ದರ್ಶನ ಪಡೆದುಕೊಂಡರು. ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿರುವ ಶರಣು ಅಂಗಡಿಯವರು ಶ್ರಾವಣ ಶನಿವಾರದ ಪ್ರಯುಕ್ತ ಶಿರಹಟ್ಟಿಯಿಂದ ಪಾದಯಾತ್ರೆ ಮೂಲಕ ಸೊರಟೂರು ಗ್ರಾಮದ ಶ್ರೀ ಕಾಲಭೈರವ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ನಂತರ ಸೊರಟೂರು ಪಕ್ಕದಲ್ಲಿರುವ ಬೆಂಚಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಮಳೆ ಬೆಳೆ ಸಮೃದ್ಧಿಗಾಗಿ ಹಾಗೂ ನಾಡಿನ ಜನತೆಯ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಿರಹಟ್ಟಿ ಹಾಗೂ ಸೊರಟೂರು ಮುಖಂಡರಾದ ಬಸವರಾಜ ರಾಜಮನೆ. ಈರಣ್ಣ ಗಾಣಿಗೇರ್. ಮುತ್ತುರಾಜ ಎಳವತ್ತಿ. ಶಿವಯೋಗಿ ಪಟ್ಟಣಶೆಟ್ಟಿ. ಮಂಜು ಬಳಿಗಾರ. ಶರಣು ಹೊಸೂರ್. ಪ್ರಭು ಹಲಸೂರು. ಮಂಜು ಅಂಗಡಿ. ಮಹಾದೇವ ಗಾಣಿಗೇರ್. ಶ್ರೀನಿವಾಸ್ ಬಾರ್ ಬಾರ್. ರಾಮಣ್ಣ ಕಂಬಳಿ. ವಿನೋದ್ ಕಪ್ಪತ್ನವರ್. ಸಿದ್ದಪ್ಪ ಕಂಬಳಿ. ಹರ್ಷ ಕಪ್ಪತ್ನವರ್. ನಾಗರಾಜ್ ತಳವಾರ್. ಸಿದ್ದಾರ್ಥ್ ಪಟ್ಟಣಶೆಟ್ಟಿ. ಅಂಬರೀಶ್ ಬೆನಕನಹಳ್ಳಿ. ಪ್ರಕಾಶ್ ಬಾರ್ ಬಾರ್. ಇನ್ನೂ ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು.
