
ಉದಯವಾಹಿನಿ, ಶಿಡ್ಲಘಟ್ಟ: ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ,ಎಂದು ಯಾರು ಗೌರವಿಸುತ್ತಾರೋ ಅವರು ಜೀವನದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸುತ್ತಾರೆ ಎಂದು ಶಾಸಕ ಬಿಎನ್ ರವಿಕುಮಾರ್ ಹೇಳಿದರು. ತಾಲೂಕಿನ ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಾಲಾ ಪಠ್ಯಪುಸ್ತಕದ ಜೊತೆಗೆ ಕ್ರೀಡೆಯು ಅತ್ಯವಶ್ಯಕವಾಗಿರುತ್ತದೆ. ಮಕ್ಕಳು ವಿದ್ಯೆಯಲ್ಲಿ ಮಾತ್ರ ಪರಿಣತರು ಎನ್ನದೆ ಅವರಿಗೆ ಯಾವ ವಿಭಾಗದಲ್ಲಿ ಆಸಕ್ತಿ ಇರುತ್ತದೆ ಅದನ್ನು ಹೊರ ತಂದು ಅವರಿಗೆ ಅದರ ಕಡೆ ಹೆಚ್ಚಿನ ಒಲವು ತೋರಬೇಕಾಗುತ್ತದೆ ಎಂದು ಶಿಕ್ಷಕರಿಗೆ ಹೇಳಿದರು. ಹಾಗೆಯೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನೀಡಿರುವ ಕ್ರೀಡಾ ಸಲಕರಣೆಗಳನ್ನು ಶಾಲೆಯ ಒಂದು ಕೋಣೆಯಲ್ಲಿ ತುಕ್ಕುಹಿಡಿಯುವ ರೀತಿ ನಾಶ ಮಾಡದೆ, ಮಕ್ಕಳಿಗೆ ಉಪಯೋಗವಾಗುವ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಎಂದು ತಿಳಿಸಿದರು.ಶಿಡ್ಲಘಟ್ಟ ತಾಲೂಕಿನ 10 ಶಾಲೆಗಳಿಗೆ ಕ್ರೀಡಾ ಸಲಕರಣೆಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಸಹಾಕ ನಿರ್ದೇಶಕ ವಿಜಯ್ ಕುಮಾರ್ ಕೆ,ಸ.ನೌ.ಸಂ ಅಧ್ಯಕ್ಷ ಕೆಎನ್ ಸುಬ್ಬಾರೆಡ್ಡಿ,ತಾಪಂ ಮಾಜಿ ಅಧ್ಯಕ್ಷ ಬಿವಿ ನಾರಾಯಣಸ್ವಾಮಿ, ದೊಡ್ಡತೇಕಹಳ್ಳಿ ಗ್ರಾಮದ ಮುಖಂಡ ಟಿಕೆ ಗುಮ್ಮರೆಡ್ಡಿ,ತಾದೂರು ರಘು,ಗ್ರಾಮ ಪಂ ಸದಸ್ಯರಾದ ಚಿಕ್ಕತೇಕಹಳ್ಳಿ ಸಿ ವೆಂಕಟೇಶಪ್ಪ, ಮುಖಂಡರಾದ ಆಂಜನೇಯರೆಡ್ಡಿ,ಕೆ.ನಾರಾಯಣಸ್ವಾಮಿ, ಸೀತಾರಾಮಪ್ಪ, ಎಸ್ಡಿಎಂ ಸಿ ಅಧ್ಯಕ್ಷ ಗಂಗಾಧರ್,ಪಿಡಿಒ ವಜ್ರೇಶ್,ಬಿಆರ್ ಸಿ ತ್ಯಾಗರಾಜ್, ಪ್ರಭಾರಿ ಮುಖ್ಯ ಶಿಕ್ಷಕರಾದ ಡಿ ಸಂತೋಷ್ ಕುಮಾರ್, ಶಾಲಾ ಸಿಬ್ಬಂದಿ,ಇತರೆ ಶಾಲಾ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.
