
ಉದಯವಾಹಿನಿ,ಚಿಂಚೋಳಿ: ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲು ಬಾಲ್ಯದಿಂದಲೇ ವಚನ ಸಾಹಿತ್ಯ ಅಧ್ಯಯನ ಮಾಡಬೇಕು,ನವ ಪೀಳಿಗೆಯ ನಾಳಿನ ಸುಂದರ ಬದುಕಿಗೆ ಶರಣರ ಜೀವನ ಪ್ರೇರಣಾತ್ಮಕವಾಗಿ ಕೆಲಸ ಮಾಡುತ್ತದೆ,ಶಿಸ್ತು,ಸಂಯಮ,ಸಮಯ ಪಾಲನೆ,ನಿರಂತರ ಅಧ್ಯಯನದಿಂದ ಮಾತ್ರ ವ್ಯಕ್ತಿ ಉನ್ನತಮಟ್ಟಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದು ಕಲಬುರ್ಗಿಯ ಶರಣ ಸಾಹಿತಿ ಡಾ.ಶಿವಶರಣಪ್ಪ ಧಾಬಾ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಗಣಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ ವಿಶ್ವವಚನ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡುವುದರಿಂದ ವ್ಯಕ್ತಿತ್ವ ವಿಕಾಸನಗೊಂಡು ಬದುಕು ಸಂಸ್ಕಾರ ಯುತವಾಗಿ ಎತ್ತರಕ್ಕೆ ಬೆಳೆಯುತ್ತದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಡಾ.ವಿಜಯಕುಮಾರ ಪರುತೆ ಮಾತನಾಡಿ ವಿದ್ಯಾರ್ಥಿಗಳ ಬದುಕಿನಲ್ಲಿ ಪಾಠ್ಯದಷ್ಟೇ,ಸಹಪಠ್ಯ ಚಟುವಟಿಕೆಗಳು ಬಹು ಮುಖ್ಯಪಾತ್ರ ವಹಿಸುತ್ತವೆ,ವಿಧ್ಯಾಭ್ಯಾಸ ಜೋತೆಯಲ್ಲಿ ವಚನ ಸಾಹಿತ್ಯಕ್ಕೂ ಕೂಡ ಸಮಯ ನಿಗಧಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಎಸ್.ಮಾಲಿ ಪಾಟೀಲ,ಮುಖ್ಯಗುರುಗಳಾದ ಮಾರುತಿ ಪತಂಗೆ,ಚನ್ನವೀರ ಕಲ್ಲೂರ,ಗುಂಡಣ್ಣ ಡಿಗ್ಗಿ ಹರಸೂರ,ರಾಚಯ್ಯಸ್ವಾಮಿ,ಅಧ್ಯಕ್ಷತೆ ಯನ್ನು ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ವಹಿಸಿದ್ದರು,ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಐನೋಳಿ ಪ್ರಾಸ್ತಾವಿಕ ಮಾತನಾಡಿದರು.ಆನಂದ ಸ್ವಾಗತಿಸಿದರು.ಚಾಂದಸಾಬ ವoದಿಸಿದರು,ಸುರೇಶ ನಿರೂಪಿಸಿದರು.
