ಉದಯವಾಹಿನಿ, ಬೀದರ್ : ಕಮಲನಗರ ತಾಲೂಕಿನ ಮದನೂರ ಗ್ರಾಮದಲ್ಲಿ ಬುಧವಾರ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಅಧಿಕೃತ ಚಾಲನೆ ನೀಡಿರುವ ಸರ್ಕಾರದ ಕಾರ್ಯಕ್ರಮ ದೊಡ್ಡ ಸ್ಕ್ರೀನ್ ಮೂಲಕ ಲೈವ ಪ್ರಸಾರ ಮಾಡಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂಜಾ ಗುಂಡಪ್ಪಾ ಬೇಲ್ಲೆ ಮಾತನಾಡಿ, ಸರ್ಕಾರದ ಪ್ರತಿಯೊಂದು ಯೋಜನೆ ಮನೆ ಮನೆಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ ಹಾಗೂ ಮತ್ತು ಯಾರೊಬ್ಬರೂ ಯೋಜನೆಯಿಂದ ಹೊರ ಉಳಿಯಬಾರದು ಎಂದು ಹೇಳಿದರು.
ಮನೆ ಯಜಮಾನನಿಗೆ ಭರ್ಜರಿ ಗಿಫ್ಟ್​ ಕೊಟ್ಟ ಸರ್ಕಾರ ರಿಮೋಟ್​ನಲ್ಲಿ ಬಟನ್ ಒತ್ತುವ ಮೂಲಕ ಎರಡು ಸಾವಿರ ರೂಗಳ ಚೆಕ್ ಬಿಡುಗಡೆ ಮಾಡಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ (Gruha Lakshmi Scheme) ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಧಿಕೃತ ಚಾಲನೆ ದೊರೆತಿದೆ. ಏಕಕಾಲಕ್ಕೆ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಸರ್ಕಾರದ 4ನೇ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಯಿತು. ಈ ಮೂಲಕ ಮನೆ ಮನೆ ಯಜಮಾನಿಯ ಅಕೌಂಟಿಗೆ 2000 ರೂಪಾಯಿ ಸಿಗಲಿದೆ. ಗೃಹಲಕ್ಷ್ಮಿಯರಿಗೆ ಸರ್ಕಾರ ದೊಡ್ಡ ಗಿಫ್ಟ್ ನೀಡಿದೆ.ಗ್ರಾಮದ ಮನೆ ಯಜಮಾನನಿಯರು ತಮ್ಮ ಮೊಬೈಲಿನಲ್ಲಿ ಸ್ವೀಕರಿಸಿದ “ಅಭಿನಂದನೆಗಳು, ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ GLMONEXXXXX ಅನ್ನು ಅನುಮೋದಿಸಲಾಗಿದೆ. ಆಗಸ್ಟ್ 2023 ರಿಂದ ರೂ.2000 ಮೊತ್ತವನ್ನು ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಧನ್ಯವಾದಗಳು – ನಿಮ್ಮ ಕರ್ನಾಟಕ ಸರ್ಕಾರ. ಸಂದೇಶದಿಂದ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಸರ್ಕಾರಕ್ಕೆ ಧನ್ಯವಾದಗಳು ತಿಳಿಸಿದರು.ಉಪಾಧ್ಯಕ್ಷೆ ಚಂದ್ರಕಲಾ ರಮೇಶ್, ಸದಸ್ಯರಾದ ನಾಗಮಾ ಮಹಾದೇವ, ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ಹರಿಬಾಜಿ ಸಿಂದೆ, ರಾಹುಲ್ ಪೀಚರಟೆ, ಮುಖಂಡ ಸೂರ್ಯಕಾಂತ ಬಿರಾದರ್, ರಾಜಕುಮಾರ್ ಬಿರಾದರ್, ದಶರಥ್ ಪರಿಟ್. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮದಾಸ ಬೇಲೂರೆ, ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಮ್ಮ ಬಿರಾದರ್, ಆಶಾ ಕಾರ್ಯಕರ್ತೆಯರಾದ ಸಿದ್ದಮ್ಮ ಸ್ವಾಮಿ, ಕವಿತಾ ಜಾಗೆ, ಸ್ವಸಹಾಯ ಸಂಘಗಳ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!