ಉದಯವಾಹಿನಿ, ನವದೆಹಲಿ: ದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಶೇ. 33ಕ್ಕಿಂತ ಹೆಚ್ಚು ಮಳೆಯ ಕೊರತೆ ಎದುರಾಗಿದ್ದು ದಾಖಲೆಯ ಅತ್ಯಂತ ಶುಷ್ಕ ವಾತಾವರಣವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 1901ರ ನಂತರ ದೇಶದಲ್ಲಿ ಅತ್ಯಂತ ಶುಷ್ಕ ತಿಂಗಳಲ್ಲಿ ಆಗಸ್ಟ್ ಸೇರಿದ್ದು ಶೇ. 33 ರಷ್ಟು ಮಳೆ ಕೊರತೆ ಎದುರಾಗಿದೆ. ಮುಂದಿನ 20 ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿಯುವ ಸಾದ್ಯತೆಗಳಿವೆ ಎಂದು ಹೇಳಲಾಗಿದೆ.ಆಗಸ್ಟ್ ತಿಂಗಳು ಕೊನೆಯಾಗಲು ಒಂದು ದಿನ ಬಾಕಿ ಇರುವಾಗ, ಆಗಸ್ಟ್‌ನಲ್ಲಿ ದೇಶಾದ್ಯಂತ ಸಾಮಾನ್ಯ ಮಳೆಯ ವಿರುದ್ಧ 160.3 ಮಿಮೀ ಮಳೆಯಾಗಿದ್ದು ಒಟ್ಟಾರೆ ಸಾಮಾನ್ಯಕ್ಕಿಂತ ಶೇಕಡಾ 33 ರಷ್ಟು ಮಳೆ ಕೊರತೆ ಎದುರಾಗಿದೆ. 2005 ರಲ್ಲಿ 191.2 ಮಿ ಮೀ ಮಳೆಯಾದಾಗ, ಸಾಮಾನ್ಯಕ್ಕಿಂತ ಶೇಕಡಾ 25 ರಷ್ಟು ಕಡಿಮೆ ಮಳೆಯಾಗಿತ್ತು. ಆಗಸ್ಟ್‌ನಲ್ಲಿ ಒಣ ತಿಂಗಳ ಪೈಕಿ ದಾಖಲೆ ಬರೆದಿದೆ. ಈ ತಿಂಗಳ ಒಟ್ಟು 170-175 ಮಿಮೀ ಮೀರುವ ಸಾಧ್ಯತೆ ಹೆಚ್ಚು ಕಡಿಮೆ, ಇದು ಆಗಸ್ಟ್‌ನಲ್ಲಿ ಶೇಕಡಾ 30 ಅಥವಾ ಅದಕ್ಕಿಂತ ಹೆಚ್ಚಿನ ಮಳೆಯ ಕೊರತೆ ಮೊದಲ ಬಾರಿಗೆ ದಾಖಲಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದುರ್ಬಲ ಮುಂಗಾರಿನ ಪರಿಸ್ಥಿತಿಗಳು ಒಂದು ತಿಂಗಳವರೆಗೆ ಮುಂದುವರಿದಿದ್ದು ಈ ಋತುವಿನಲ್ಲಿ ದೇಶಾದ್ಯಂತ ಮಳೆಯ ಕೊರತೆ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಶೇ. 10 ನಷ್ಟು ಕೊರತೆ ಎದುರಾಗಬಹುದು ಎಂದು ಹೇಳಲಾಗಿದೆ. ಸೆಪ್ಟೆಂಬರ್ 2 ರಿಂದ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ., ಉತ್ತರ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದ ಪರಿಚಲನೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
