ಉದಯವಾಹಿನಿ ಬಸವನಬಾಗೇವಾಡಿ: ಕಳೆದ ವಾರದಿಂದ ಪಟ್ಟಣದ ಮನೆಗಳ ಕಸ ವಿಲೇವಾರಿಯಾಗದ ಕಾರಣ ಪಟ್ಟಣದ ಶ್ರೀರಾಮ ನಗರದ ಹತ್ತಿರ ಇರುವ ಸಾರ್ವಜನಿಕ ಶೌಚಾಲಯ ಬಳಿ ರಸ್ತೆಯ ಮೇಲೆ ಕಸ ಸಂಗ್ರಹವಾಗಿದೆ. ವಿಲೇವಾರಿಯಾಗದೇ ಹಂದಿಗಳ ವಿಶ್ರಾಂತಿ ತಾಣವಾಗಿ ಮಾರ್ಪಟ್ಟು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವ ಹಾಗೂ ಅಸಹ್ಯ ಹುಟ್ಟಿಸುವ ತಾಣವಾಗಿ ನಿರ್ಮಾಣವಾಗಿದೆ. ಪುರಸಭೆ ಅಧಿಕಾರಿಗಳು ಈ ಕೂಡಲೇ ಇಲ್ಲಿಯ ಕಸವನ್ನು ವಿಲೇವಾರಿಗೊಳಿಸಿ, ಇಲ್ಲಿಯ ನಿವಾಸಿಗಳಿಗೆ ಕಸ ರಸ್ತೆಯ ಮೇಲೆ ಹಾಕದಂತೆ ಹಾಗೂ ಮಲ ವಿಸರ್ಜನೆ ಮಾಡದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಿಯಾರೇ?
