
ಉದಯವಾಹಿನಿ, ಕುಶಾಲನಗರ: ಕುಶಾಲನಗರ ತಾಲೂಕಿನ ಆನೆ ಕಾಡು ಹಾಗೂ ದುಬಾರೆ ಎರಡು ಆನೆ ಶಿಬಿರಗಳಿಂದ ಮೈಸೂರು ದಸರಕ್ಕೆ ಆನೆಗಳನ್ನು ಕಳುಹಿಸಿಕೊಡಲಾಯಿತು.
ಎರಡು ಶಿಬಿರಗಳಲ್ಲಿರುವ ಮೀಸಲು ಅರಣ್ಯದಿಂದ ವಿಜಯ 63 ಗೋಪಿ 41 ಧನಂಜಯ 45 ಎಂಬ ಸಾಕಾನೆಗಳನ್ನು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೈಸೂರು ದಸರಕ್ಕೆ ಕಳುಹಿಸಿದ ಸಂದರ್ಭ ಗಣ್ಯರು ಹಾಜರಿದ್ದರು.
