ಉದಯವಾಹಿನಿ ತಾಳಿಕೋಟಿ: ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸಿ ಅವರನ್ನು ಸಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರಹಲಕ್ಷ್ಮಿ ಯೋಜನೆಯನ್ನು ಗ್ರಾಮೀಣ ಭಾಗದ ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕು. ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ. ಆರ್. ಬಿರಾದಾರ ಹೇಳಿದರು. ತಾಲೂಕಿನ ಹಿರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ಗೃಹಲಕ್ಷ್ಮಿ ಯೋಜನೆ, ನೇರ ಪ್ರಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು ಈಗಾಗಲೇ ಈ ಯೋಜನೆಗೆ ಯಾರೆಲ್ಲಾ ನೋಂದಣಿಮಾಡಿಕೊಂಡಿದ್ದಾರೊ ಅವರೆಲ್ಲರ ಬ್ಯಾಂಕ್ ಖಾತೆಗೆ 2000 ಜಮಾ ಆಗಲಿದೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರುವುದನ್ನು ಧೃಡಿಪಡಿಸಿಕೊಳ್ಳಿ ಎಂದರು. ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಬಿರಾದಾರ್. ಉಪಾಧ್ಯಕ್ಷೆ ಶಾರದಾ ಹಾದಿಮನಿ ಪಿ ಡಿ ಓ .ಸಿ. ಎಸ್. ಮಠ ಗ್ರಾಮದ ಗಣ್ಯರು ಹಾಗೂ ಸಿಬ್ಬಂದಿಗಳು ಇದ್ದರು. ಮೈಸೂರು ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 300 ಮಹಿಳೆಯರು ಈ ಕಾರ್ಯಕ್ರಮವನ್ನು ವೀಕ್ಷಿಸಿದರು

Leave a Reply

Your email address will not be published. Required fields are marked *

error: Content is protected !!