
ಉದಯವಾಹಿನಿ ಪಾವಗಡ: ಹನ್ನೆರಡನೇ ಶತಮಾನದಲ್ಲಿದ್ದ ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭಾವಿ ಶರಣ ನುಲಿಯ ಚಂದಯ್ಯನವರು. ತಮ್ಮ ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯ ಸಾರಿದ್ದಾರೆ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘ ತಾಲ್ಲೂಕು ಅಧ್ಯಕ್ಷ ಕೆಇಬಿ ಗಂಗಪ್ಪ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶರಣ ನುಲಿಯ ಚಂದಯ್ಯ ಅವರ 916 ನೇ ಜಯಂತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ. ಬಸವಣ್ಣನವರ ಸಾಮಾಜಿಕ ಸಮಾನತೆಯ ವಿಚಾರ ಧಾರೆ, ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ತೆರಳಿ ಕಾಯಕ ಜೀವಿಯಾಗಿ, ದಾಸೋಹ ಮಾಡುತ್ತ ಬದುಕಿದರು. ನುಲಿಯ ಚಂದಯ್ಯ ದಲಿತ ವರ್ಗದ ಹೆಮ್ಮೆಯ ವಚನಕಾರ ಎಂದು ಹೇಳಿದರು. ಈ ವೇಳೆ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರೇಡ್-2 ತಹಶೀಲ್ದಾರ್ ಎನ್.ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ವಧರ್ಮ ಶಾಂತಿ ಪೀಠದ ರಾಮಮೂರ್ತಿ ಸ್ವಾಮೀಜಿ, ಸಂಘದ ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ದಾನ್ ಫೌಂಡೇಶನ್ ವೀರಭದ್ರಪ್ಪ, ಹನುಮಂತರಾಯಪ್ಪ, ಗಂಗಾಧರ್, ಯಶೋಧಮ್ಮ, ಎನ್.ನಾಗರಾಜು, ಪಾಂಡಪ್ಪ, ಪಳವಳ್ಳಿ ನಾಗಾರ್ಜುನ, ಕಸಬಾ ಕಂದಾಯ ನಿರೀಕ್ಷಕ ರಾಜ್ ಗೋಪಾಲ್, ಗ್ರಾಮ ಲೆಕ್ಕಾಧಿಕಾರಿ ರಾಜೇಶ್ ಇದ್ದರು.
