
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಶಾಂತಿಯುತವಾಗಿ ಸಹ ಬಾಳ್ವೆ ನಡೆಸುವ ಸಂದೇಶವನ್ನು ಸಾರುವ ರಕ್ಷ ಬಂಧನ ಹಬ್ಬವನ್ನು ರಾಜಕೀಯ ಮಹಿಳೆಯರು ಸಾರ್ವಜನಿಕ ಮಹಿಳೆಯರು
ರಕ್ಷೆ ಕಟ್ಟುವ ಮೂಲಕ ಭ್ರಾತೃತ್ವದ ಸಂದೇಶ ಸಾರುವೋಣ ಎಂದು ಬಿಜೆಪಿ ಪ್ರಭಾವಿ ಮುಖಂಡ ಹಾಗೂ ಕೃಷ್ಣ ಚಂದ್ರ ಕಲ್ಯಾಣ ಮಂಟಪ ಮಾಲೀಕ ಪಿ ಎನ್ ಕೃಷ್ಣಮೂರ್ತಿ ಹೇಳಿದರು.
ಚೊಕ್ಕಸಂದ್ರ ಕಾಂಗ್ರೆಸ್ ಬ್ಲಾಕ್ ಮಹಿಳಾ ಅಧ್ಯಕ್ಷೆ ನಿರ್ಮಲಮ್ಮ ಅವರ ನೇತೃತ್ವದಲ್ಲಿ ನೂರಾರು ಮಹಿಳೆಯರು ಜಾಲಹಳ್ಳಿ ಕ್ರಾಸ್ ಬಳಿ ಇರುವ ಪ್ರಸಿದ್ಧ ಕೃಷ್ಣ ಚಂದ್ರ ಕಲ್ಯಾಣ ಮಂಟಪಕ್ಕೆ ತೆರಳಿ ಕೃಷ್ಣಮೂರ್ತಿ ಅವರಿಗೆ ರಕ್ಷ ಬಂಧನ ಹಬ್ಬವು ತಂಗಿನ ಅಣ್ಣನಿಗೆ ದೀಕ್ಷೆಯನ್ನು ಕಟ್ಟಿ ರಕ್ಷಣೆ ಕೋರುವುದು ಸಹೋದರತ್ವದ ಮಹತ್ವ ಸಾರುವ ಹಬ್ಬವೇ ರಕ್ಷಾ ಬಂಧನವು ವಿಶ್ವ ಭ್ರಾತೃತ್ವ ಸಾರುವ ಮಹತ್ವದ ಹಬ್ಬವಾಗಿದೆ ಎಂದು ರಕ್ಷಾ (ರಾಖಿ) ಸ್ವೀಕರಿಸಿ ಪಿ ಎನ್ ಕೃಷ್ಣಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ನಿರ್ಮಲಮ್ಮ ಅವರಿಗೆ ಮಹಿಳೆಯರು ಕಾರ್ಯಕರ್ತರು ಸಾಥ್ ನೀಡಿದರು.
