ಉದಯವಾಹಿನಿ, ಚಿತ್ರದುರ್ಗ: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರಗೆ ಅನೇಕ ಪ್ರಮುಖ ಪಾತ್ರಗಳಿವೆ. ಸಾಮಾನ್ಯ ನಾಗರೀಕನಿಂದ ಹಿಡಿದು, ಉತ್ತಮ ಶಿಕ್ಷಕ  ಸಮಾಜದ ನಿರ್ಮಾತೃ, ದೇಶದ ಅಭಿವೃದ್ಧಿ ಮತ್ತು ಬೆಳವಣಿಗೆಯು ಶಿಕ್ಷಕರು ನೀಡುವ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ, ಅದು ಉತ್ತಮ ಶಿಕ್ಷಕರಿಂದ ಮಾತ್ರ ಸಾಧ್ಯವಾಗುತ್ತದೆ ಅಂತಹ ಉತ್ತಮ ಶಿಕ್ಷರನ್ನು ಈ ಶಿಕ್ಷಕರ ದಿನದಂದು ಗೌರವಿಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಒಬ್ಬ ಶಿಕ್ಷಕರನ್ನು ಗೌರವಿಸಿದರೆ ಇಡೀ ಸಮಾಜವನ್ನು ಗೌರವಿಸಿದಂತೆ ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಹಾಲುಮಜಲು ಅಭಿಪ್ರಾಯ ಪಟ್ಟಿದ್ದಾರೆ.ಅವರು ದಿನಾಂಕ 5 ಸೆಪ್ಟೆಂಬರ್ 2023ರ ಮಂಗಳವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ತುರುವನೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕಿನ ಅಳಿಯೂರು ಗ್ರಾಮದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ನಿರ್ಮಲಾ ಕೆ.ಹೆಚ್., ಮದರಿಪುರ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ನಾಗಲತಾ, ಬುರುಜನಹಟ್ಟಿ ಸ..ಉರ್ದು ಹಿರಿಯ ಪ್ರಾಥಮಿಕ ಶಾಲೆಯ ರೇಣುಕಾ ಆರ್., ಚಿತ್ರದುರ್ಗ ಸಂತ ಜೋಸೆಫರ ಕಾನ್ವೆಂಟ್ ಶಾಲೆಯ ಶಿಕ್ಷಕಿ ಶ್ರೀಮತಿ ತ್ರಿವೇಣಿ ಹಾಗೂ ಜೋಗಿಮಟ್ಟಿ ರಸ್ತೆಯ ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯ ಶಿಕ್ಷಕ ರಾಮಲಿಂಗಪ್ಪ ಡಿ.ಹೆಚ್ ರವರನ್ನು ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಕೆ.ಅಂಬೇಕರ್ ಸನ್ಮಾನಿಸಿ ಗೌರವಿಕಾಡಿದರು. ಪೋಲಿಸ್ ತರಬೇತುದಾರ ಮಲ್ಲಿಕಾರ್ಜುನಚಾರ್, ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಮಮತಬೇದ್ರೆ  ಕಾರ್ಯಕ್ರಮ ಕುರಿತು ಮಾತನಾಡಿದರು. ಬ್ಯಾಂಕ್ ಕಾಲೋನಿ ಯೋಗ ಶಾಖೆಯ ಅಧ್ಯಕ್ಷೆ ಶ್ರೀಮತಿ ವನಜಾಕ್ಷಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿಯರಾದ ಶ್ರೀಮತಿ ಮಂಜುಳಾ, ವಸಂತಲಕ್ಷ್ಮಿ, ಸಾಧಕಿಯರಾದ ಅಂಬುಜಕ್ಷಮ್ಮ, ಸವಿತಾ ಗುರು ಮಹಿಮೆ ಕುರಿತ ಹಾಡುಗಳನ್ನು ಕಾಡಿದರು

Leave a Reply

Your email address will not be published. Required fields are marked *

error: Content is protected !!