ಉದಯವಾಹಿನಿ, ಬಂಗಾರಪೇಟೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ವಿಜಯಕುಮಾರಿ ಆರ್‌ಸಿಹೆಚ್ ಅಧಿಕಾರಿಯು ಬ್ರಹ್ಮಾಂಡ ಭಷ್ಟಚಾರ ನಡೆಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಾಭಿಮಾನ ರೈತಸಂಘದ ಸಂಸ್ಥಾಪಕ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಅವರು ಸತತವಾಗಿ ೨ವರ್ಷಗಳಿಂದ ಹೋರಾಟ ಮಾಡಿದರು. ಇದರ ಪ್ರತಿಫಲವಾಗಿ ಎಂ.ಎಸ್.ಹೆಗ್ಡೆ ನಗ್ರೆ (ಜಿಲ್ಲಾ ನಿವೃತ್ತ ನ್ಯಾಯಮೂರ್ತಿಗಳು) ಹಾಗೂ ಇಲಾಖೆಯ ಅಧಿಕಾರಿಗಳು ಸುದೀರ್ಘವಾಗಿ ತನಿಖೆ ನಡೆಸಿ ಡಾ.ವಿಜಯಕುಮಾರಿಯವರು ಆರೋಪಿ ಎಂದು ಮಂಡನಾ ವರದಿಯನ್ನು ಮಂಡಿಸಿದರು. ಇವರ ವರದಿಗೆ ಅನುಗುಣವಾಗಿ ಜು.೧೩ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು ಒಂದು ವಾರ್ಷಿಕ ಬಡ್ತಿ ಮತ್ತು ಭತ್ಯೆಯನ್ನು ತಡೆಹಿಡಿದು ದಂಡವನ್ನು ವಿಧಿಸಿರುತ್ತಾರೆ. ಇದು ಸಮರ್ಪಕವಾಗಿಲ್ಲದ ಕಾರಣ ಐತಾಂಡಹಳ್ಳಿ ಮಂಜುನಾಥ್ ಅವರು ಮತ್ತೊಮ್ಮೆ ಸಚಿವಾಲಯದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಲಾಗಿತ್ತು.
ಇವರ ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸಿದ ಕರ್ನಾಟಕ ಸರ್ಕಾರದ ಮುಖ್ಯ ಅಧೀನ ಕಾರ್ಯದರ್ಶಿಗಳು ಮಾನ್ಯ ಸಚಿವರ ಗಮನಕ್ಕೆ ತರುವುದರ ಮೂಲಕ ದಿನಾಂಕ ೦೨/೦೯/೨೦೨೩ರಂದು ಸಚಿವರ ಆದೇಶದಂತೆ ವಿಜಯಕುಮಾರಿಯವರನ್ನು ಸಾರ್ವಜನಿಕ ಮಾಲೂರು ತಾಲ್ಲೂಕು ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿರುತ್ತದೆ. ಇದು ನ್ಯಾಯಕ್ಕೆ ಸಂದ ಜಯವಾಗಿದೆ ಎಂದು ಮಂಜುನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!