
ಉದಯವಾಹಿನಿ,ಇಂಡಿ : ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಪವಾಡ ಪುರುಷ ಶ್ರೀ ಸಿದ್ದಲಿಂಗ ಮಹಾರಾಜರ 175 ನೇ ತೊಟ್ಟಿಲು ಕಾರ್ಯಕ್ರಮವು ಲಚ್ಯಾಣದ ಕಮರಿ ಮಠದಲ್ಲಿ ಅದ್ಧೂರಿಯಾಗಿ ಜರುಗಿತು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಮುತ್ತೈದೆಯರು ಶ್ರೀ ಸಿದ್ದಲಿಂಗ ಮಹಾರಾಜರ ತೊಟ್ಟಿಲು ತೂಗುವ ಮೂಲಕ ಹರಕೆಯನ್ನು ಪೂರೈಸಿದರು ಲಚ್ಯಾಣ ಗ್ರಾಮದ ದಂಪತಿಗಳಾದ ಮಲ್ಲಿಕಾರ್ಜುನ ಮುಜಗೊಂಡ ಮತ್ತು ಅವರ ಶ್ರೀಮತಿಯವರು ಶ್ರೀ ಸಿದ್ದಲಿಂಗ ಮಹಾರಾಜರಿಗೆ ಹರಕೆಯನ್ನು ಕಟ್ಟಿದ್ದರು ಅದರ ಫಲವಾಗಿ ಅವರಿಗೆ ಎರಡು ಗಂಡು ಮಕ್ಕಳು ಜನಿಸಿವೆ.ಬಂಜೆತನ ದಿಂದ ಬಳಲೂವ ಹೆಣ್ಣು ಮಕ್ಕಳು ಇಲ್ಲಿ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ.ಮಹಿಮಾ ಪುರುಷ ಶ್ರೀ ಸಿದ್ದಲಿಂಗ ಮಹಾರಾಜರ ಕೃಪಾಆಶೀರ್ವಾದ ದಿಂದ ಮಕ್ಕಳನ್ನು ಪಡೆಯುತ್ತಾರೆ ಕಾರ್ಯಕ್ರಮದಲಿ ಬಂಥನಾಳ ಮತ್ತು ಲಚ್ಯಾಣದ ಪೀಠಾಧಿಪತಿಗಳಾದ ಡಾ|| ವೃಷಭಲಿಂಗ ಸ್ವಾಮೀಜಿಗಳು ಸಾನಿಧ್ಯವನ್ನು ವಹಿಸಿದ್ದರು ಮತ್ತು ಅಗರಖೇಡದ ಅಭಿನವಶ್ರೀಗಳು.ಮತ್ತು ಮಾತೆ ದ್ರಾಕ್ಷಾಯಿಣಿ ಅಮ್ಮ ನವರು ಉಪಸ್ಥಿತರಿದ್ದರು.ವೃಷಭಲಿಂಗ ಸ್ವಾಮಿಗಳು ಭಕ್ತರಿಗೆ ಆಶೀರ್ವಾಚನ ನೀಡಿದರು.
