ಉದಯವಾಹಿನಿ,ತಾಳಿಕೋಟಿ : ಮತಕ್ಷೇತ್ರದ ಎಲ್ಲಾ ಗ್ರಾಮಗಳ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಮನೆ ಮನೆಗೆ ನಳ ಜೋಡಣೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲಾಗುತ್ತಿದೆ ಕಾಮಗಾರಿ ಸುಗಮವಾಗಿ ನಡೆಯುವಂತಾಗಲು ಗುತ್ತಿಗೆದಾರರೊಂದಿಗೆ ಸಹಕರಿಸಬೇಕು ಎಂದು ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು. ಮಂಗಳವಾರ ತಾಲೂಕಿನ ಹಂದ್ರಾಳ ಹಾಗೂ ವನ ಹಳ್ಳಿ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಮುದ್ದೇಬಿಹಾಳ ಹಮ್ಮಿಕೊಂಡ 2022 23ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯ ಸುಮಾರು 168 ಲಕ್ಷ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಹೊನಹಳ್ಳಿ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು ಸದರಿ ಕಾಮಗಾರಿಯು ಗುಣಮಟ್ಟದಾಗಿರುವಂತೆ ನೋಡಿಕೊಳ್ಳಲು ಗುತ್ತಿಗೆದಾರರಿಗೆ ಆದೇಶಿಸುತ್ತೇನೆ ಕಳೆದ ಅವಧಿಯಲ್ಲಿ ಕೆಲವು ಕಾಮಗಾರಿಗಳು ಕಳಪೆ ಗುಣಮಟ್ಟದ ಹಾಗೂ ಅವ ವೈಜ್ಞಾನಿಕ ವಾಗಿವೆ ಎಂದು ತಿಳಿದು ಬಂದಿದೆ ಇದಕ್ಕೆ ನಾನು ನನ್ನ ಅವಧಿಯಲ್ಲಿ ಅವಕಾಶ ಕೊಡುವುದಿಲ್ಲ ಎಂದವರು ಇಂದು ಸುಮಾರು 1.68 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದೇನೆ ಸುಮಾರು 460 ಮನೆಗಳಿಗೆ ನೀರು ಪೂರೈಸಲಾಗುವುದು ನೀರನ್ನು ಮಿತವಾಗಿ ಬಳಸಿ ಈ ಕಾಮಗಾರಿ ಮೂರು ತಿಂಗಳ ಒಳಗಾಗಿ ಮುಕ್ತಾಯವಾಗಲಿದೆ ನೀವು ಹಲವಾರು ಬೇಡಿಕೆಗಳನ್ನು ಇಟ್ಟಿದ್ದೀರಿ ಆದಷ್ಟು ಬೇಗ ಈ ಭಾಗದಲ್ಲಿ ಗ್ರಾಮ ಸಭೆಗಳನ್ನು ನಡೆಸುವುದರ ಮೂಲಕ ಸಮಗ್ರ ವರದಿಯನ್ನು ಸಿದ್ಧಪಡಿಸಿ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು ಇದೇ ಸಂದರ್ಭದಲ್ಲಿ ಶಾಸಕ ನಾಡಗೌಡರನ್ನು ಗ್ರಾಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ ಆರ್ ಬಿರಾದಾರ್ ಹಂದ್ರಾಳ ಗ್ರಾಪಂ ಅಧ್ಯಕ್ಷ ಬಸನಗೌಡ ಸಾಸನೂರ ವನ ಹಳ್ಳಿ ಅಧ್ಯಕ್ಷರಾದ ಶಾರದಾ ಹಡಪದ್ ಪಿಡಿಒಗಳಾದ ಬಿ ಎಸ್ ಹಿರೇ ಕುರುಬರ ರಾಜೇಶ್ವರಿ ದೇವೂರ್ ಗ್ರಾಮದ ಗಣ್ಯರಾದ ಸಾಹೇಬ್ ಗೌಡ ಮೇಟಿ ಶಿವನಗೌಡ ಬಿರಾದಾರ್ ಸಂಗಯ್ಯ ಹಿರೇಮಠ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದನಗೌಡ ಪಾಟೀಲ್ಗಂಗಪ್ಪಬಡಿಗೇರ.ಎಇಇ ಆರ್ ಎಸ್.ಹಿರೆಗೌಡರ.ಎಇ.ರವಿ ಆಸಂಗಿ. ಗುತ್ತಿಗೆದಾರರಾದ ಎಸ್ ಬಿ ಕರೆಕಲ್. ಸಾಲಿಮಠ ಹಾಗೂ ಗ್ರಾಮಸ್ಥರು ಇದ್ದರು

Leave a Reply

Your email address will not be published. Required fields are marked *

error: Content is protected !!