ಉದಯವಾಹಿನಿ ದೇವನಹಳ್ಳಿ : ದೇವನಹಳ್ಳಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಬಾಲಕೀಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ದೊರೆಯುತ್ತಿರುವ ಸೌಲಭ್ಯ ಹಾಗೂ ಅವರಿಗೆ ಬೇಕಾದ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತುತೆ ನಡೆಸಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಅಂಬೇಡ್ಕರ ಭವನದ ಮುಂಭಾಗವಿರುವ ಕಾಲೇಜು ಬಾಲಕೀಯರ ವಸತಿ ನಿಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು. ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯ ಅಂಗನವಾಡಿ ಸರ್ಕಾರಿ ಶಾಲೆಗಳನ್ನು ನಿರ್ವಹಣೆ ಮಾಡುತ್ತಿದ್ದೇವೆ. ದೇವನಹಳ್ಳಿ ವಸತಿ ನಿಲಯಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ, ಇನ್ನಿತರೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದು ವಸತಿ ನಿಲಯ ನಿರ್ವಹಣೆ ಉತ್ತಮವಾಗಿದೆ. ಇತ್ತೀಚೆಗೆ ಚಿತ್ರದುರ್ಗದ ಕಾವಾಡಿಗರ ಗಟ್ಟಿಯಲ್ಲಿ ಕಲುಷಿತ ನೀರು ಸೇವನೆ ಮಾಡಿ ಆರೋಗ್ಯದ ಸಮಸ್ಯೆಯಾಗಿತ್ತು. ಆ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಅರ್ಬನ್ ವಿಭಾಗದಲ್ಲಿ ಎಲ್ಲಾ ಸರಕಾರಿ ಸಂಸ್ಥೆಗಳಲ್ಲಿ ವಾಟರ್ ಟ್ಯಾಂಕ್ ಪರಿಶೀಲನೆ ಮಾಡುತಿದ್ದೇವೆ. ಸಾರ್ವಜನಿಕರು ಅವರ ಮನೆಗಳಲ್ಲಿರುವ ನೆಲಸಂಪು, ಟ್ಯಾಂಕ್‌ಗಳನ್ನು ಆಗಿಂದಾಗ್ಗೆ ಸ್ವಚ್ಚಗೊಳಿಸಿಕೊಂಡು ನೀರು ಬಳಸಿ, ಸರಕಾರ ಈ ವಿಚಾರವಾಗಿ ಹೆಚ್ಚು ಗಮನ ಹರಿಸುತ್ತಿದೆ. ವಸತಿ ನಿಲಯದಲ್ಲೂ ಸಂಪ್ ಪರಿಶೀಲನೆ ನಡೆಸಿದ್ದೇನೆ ಸ್ವಚ್ಚವಾಗಿದೆ. ಉಟ ತಿಂಡಿ ವ್ಯವಸ್ಥೆ ಉತ್ತಮವಾಗಿದೆ, ಸರಕಾರ ಗ್ರಾಮಾಂತರ ಜೆಲ್ಲೆಯ ನಾಲ್ಕು ತಾಲೂಕುಗಳನ್ನು ಬರಪೀಡತ ಎಂದು ಘೋಷಣೆ ಮಾಡಿದ್ದು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿಮಾತನಾಡಿದ ಜಿಲ್ಲಾಧಿಕಾರಿ ರಾಜ್ಯ ಸರಕಾರ ಬರಪೀಡಿತ ಎಂದು ಘೋಷಣೆ ಮಾಡಿ ಆದೇಶ ಹೊರಡಿಸಿದೆ, ಮುಖ್ಯಮಂತ್ರಿಗಳ ಸ್ಪಷ್ಟ ನಿರ್ದೇಶನದಂತೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ, ಕೊಳವೆ ಬಾರಿ ದುರಸ್ಥಿಯಾದರೆ ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಿರ್ದೇಶನ ನೀಡಲಾಗಿದೆ. ಕೊಳವೆ ಬಾವಿಗಳು ಬತ್ತಿದಾಗ ಅವಶ್ಯಕತೆ ಇರುವ ಕಡೆ ನೂತನ ಕೊಳವೆ ಬಾವಿ ಕೊರೆಸಲಾಗುವುದು, ಬರ ತೀಕ್ಷ್ಣವಾದರೆ ಸರಕಾರದಿಂದ ಕೊರೆದಿರುವ ಕೊಳವೆಬಾವಿಗಳು ಬತ್ತಿಹೋದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಂಡು ನೀರು ಸರಬರಾಜು ಮಾಡಲು ಈಗಾಗಲೇ ಎಲ್ಲರಿಗೂ ನಿರ್ದೇಶನ ನೀಡಲಾಗಿದೆ. ಅವಶ್ಯಕತೆ ಬಂದಾಗ ಖಾಸಗಿ ಕೊಳವೆಬಾವಿಗಳನ್ನು ಬಳಸಿಕೊಳ್ಳಲಾಗುವುದು. ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಜಾನುವಾರುಗಳಿಗೆ ಮೇವು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಮಾಡುವವರಿಗೆ ವರ್ಷದಲ್ಲಿ 100 ದಿನಳಿದ್ದು ಅದನ್ನು ಬರಘೋಷಣೆಯಾಗಿರುವ ಹಿನ್ನೆಲೆ 150 ದಿನಗಳಿಗೆ ಏರಿಕೆ ಮಾಡಲು ಅವಕಾಶವಿದ್ದು ಅದನ್ನು ಸಹ ಮಾಡಲಾಗುವುದು ಎಂದರು. ಇದೆ ವೇಳೆ ಜಿಲ್ಲಾ ಪಂಚಾಯತ್ ಸಿ.ಇ.ಓ  ಡಾ|| ಕೆ.ಎನ್. ಅನುರಾಧ, ಉಪ ಕಾರ್ಯದರ್ಶಿ ಕೆ.ಟಿ. ರಮೇಶ್, ತಹಶಿಲ್ದಾರ್ ಶಿವರಾಜ್,  ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ, ಸಹಾಯಕ ನಿರ್ದೇಶಕಿ ನಳಿನಾಕ್ಷಿ,  ಇ.ಓ ಶ್ರೀನಾಥ್‌ಗೌಡ, ನಿರ್ಮಿತಿ ಕೇಂದ್ರದ ಪಿ.ಡಿ. ಮೋಹನ್ ಕುಮಾರ್, ನಿಲಯ ಪಾಲಕಿ ಭಾಗ್ಯಮ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!