ಉದಯವಾಹಿನಿ, ವಿಶ್ವ ಧ್ಯಾನ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸುವ ಮೂಲಕ, ವಿಶ್ವಸಂಸ್ಥೆಯು ವ್ಯಕ್ತಿಗಳನ್ನು ಹಾಗೂ ರಾಷ್ಟ್ರಗಳನ್ನು ಸಹ ಮಾನವ ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದಾಗಿ ಧ್ಯಾನಕ್ಕೆ ಆದ್ಯತೆ ನೀಡಲು ಪ್ರೇರೇಪಿಸಿದೆ.ಧ್ಯಾನವನ್ನು ಭಗವಂತನ ಮೇಲಿನ ಏಕಾಗ್ರತೆ ಎಂದು ಸರಿಯಾಗಿ ವ್ಯಾಖ್ಯಾನಿಸಲಾಗಿದೆ. ಪ್ರತಿ ದಿನ ಕೇವಲ ಸ್ವಲ್ಪ ಸಮಯವನ್ನು ಧ್ಯಾನದಲ್ಲಿ ಕಳೆಯುವ ಸರಳ ಅಭ್ಯಾಸದಿಂದಲೇ, ಮಾನವರು ತಮ್ಮ ಮಾನಸಿಕ ಶಾಂತಿಯ ಮಟ್ಟವನ್ನು ಮತ್ತು ದೈಹಿಕ ಆರೋಗ್ಯವನ್ನು ಸಹ ಗಮನಾರ್ಹವಾಗಿ ಹೆಚ್ಚಿಸಿ ಕೊಳ್ಳಬಹುದು.
ಪಶ್ಚಿಮದಲ್ಲಿ ಯೋಗದ ಪಿತಾಮಹರೆಂದು ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ, ಹಾಗೂ ವಿಶ್ವ ಮಾನ್ಯ ‘ಯೋಗಿಯ ಆತ್ಮಕಥೆ’ ಗ್ರಂಥದ ಲೇಖಕರಾದ ಪರಮಹಂಸ ಯೋಗಾನಂದರು, ಎಲ್ಲ ಮಾನವರಿಗೂ ಧ್ಯಾನದ ಪರಮ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ್ದಾರೆ.ಉನ್ನತ ಆತ್ಮದೊಂದಿಗೆ ಸಂಪರ್ಕ ಸಾಧಿಸುವ ಒಂದು ಸಮಗ್ರ, ವೈಜ್ಞಾನಿಕ, ಸರ್ವವ್ಯಾಪಿ ವಿಧಾನ ವಾಗಿರುವ ಕ್ರಿಯಾ ಯೋಗದಂತಹ ಧ್ಯಾನದ ವೈಜ್ಞಾನಿಕ ಮಾರ್ಗವನ್ನು ಅನುಸರಿಸುವುದರ ಮೂಲಕ, ಪ್ರತಿಯೊಬ್ಬ ವ್ಯಕ್ತಿಯು ನಿಜವಾದ ಆಂತರಿಕ ಶಾಂತಿಯನ್ನು ಕಂಡುಕೊಳ್ಳುವಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಬಹುದು. ಅಷ್ಟೇ ಅಲ್ಲದೆ, ಕ್ರಿಯಾ ಯೋಗ ಧ್ಯಾನ ತಂತ್ರ ಮತ್ತು ಅದರ ಸಂಬಂಧಿತ ತಂತ್ರಗಳು ದೇಹ, ಮನಸ್ಸು ಮತ್ತು ಆತ್ಮಕ್ಕೆ ಅತ್ಯಗತ್ಯವಾದ ನವಚೈತನ್ಯವನ್ನು ಒದಗಿಸುತ್ತವೆ.

ಯೋಗ’ ಎಂಬ ಪದವು ನಿಜವಾಗಿ ಭಗವಂತನೊಂದಿಗೆ ಐಕ್ಯತೆಯನ್ನು ಸೂಚಿಸುತ್ತದೆ ಮತ್ತು ಧ್ಯಾನ ಕ್ರಿಯೆಯು ಯೋಗ ಮಾರ್ಗದ ಅವಿಭಾಜ್ಯ ಅಂಗವಾಗಿದೆ. 1917ರಲ್ಲಿ ಪರಮಹಂಸ ಯೋಗಾ ನಂದರು ಸ್ಥಾಪಿಸಿದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್), ಮಹಾನ್ ಗುರುವಿನ ಕ್ರಿಯಾ ಯೋಗದ ಬೋಧನೆಗಳನ್ನು ಪ್ರಸಾರ ಮಾಡುತ್ತದೆ. ಈ ಬೋಧನೆಗಳು, ಉನ್ನತ ಗುರಿಯಾದ ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಲು, ನಿಯಮಿತವಾದ ಆಳವಾದ ಧ್ಯಾನವೇ ಪ್ರಾಥ ಮಿಕ ಮಾರ್ಗವೆಂದು ಅತ್ಯಂತ ಒತ್ತುಕೊಟ್ಟು ಹೇಳುತ್ತವೆ.

ಯೋಗಿಯ ಆತ್ಮಕಥೆಯಲ್ಲಿ, ಪರಮಹಂಸ ಯೋಗಾನಂದರು ತಿಳಿಸಿರುವುದೇನೆಂದರೆ, ಕ್ರಿಯಾ ಯೋಗ ಧ್ಯಾನದ ವಿಜ್ಞಾನವು ಇತರ ಎಲ್ಲ ಆಧ್ಯಾತ್ಮಿಕ ಅಭ್ಯಾಸಗಳಿಗಿಂತ ಶ್ರೇಷ್ಠವಾದುದು ಮತ್ತು ಅದನ್ನು ಭಕ್ತಿಯೊಂದಿಗೆ ಅಭ್ಯಾಸ ಮಾಡಿದಾಗ, ಅದು ಪರಮ ಗುರಿಯನ್ನು ಸಾಧಿಸುವಲ್ಲಿ ಎಂದೆಂ ದಿಗೂ ವಿಫಲವಾಗುವುದಿಲ್ಲ!

ಕಾರ್ಯನಿರತ ವೃತ್ತಿಪರರು ತಮ್ಮ ದೈನಂದಿನ ದಿನಚರಿಯಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳು ವುದನ್ನು ಮುಂದೂಡಬಹುದು ಎಂದು ಭಾವಿಸುವುದು ಘೋರವಾದ ತಪ್ಪು ತಿಳುವಳಿಕೆಯಾಗಿದೆ. ವ್ಯಸ್ತ ಜೀವನವು ತನ್ನೊಂದಿಗೆ ಅನಿವಾರ್ಯವಾಗಿ ತರುವ ಒತ್ತಡಗಳನ್ನು ಉತ್ತಮವಾಗಿ ನಿಭಾ ಯಿಸಲು, ಧ್ಯಾನದ ಅಭ್ಯಾಸವು ಇನ್ನೂ ಹೆಚ್ಚಾಗಿ ಅಗತ್ಯವಿದೆ.ಹಾರ್ವರ್ಡ್ ವಿಶ್ವವಿದ್ಯಾಲಯದ ಒಂದು ಅಧ್ಯಯನವು, ನಿಯಮಿತವಾಗಿ ಧ್ಯಾನ ಮಾಡುವ ಸಿಇಒಗಳು ತಮ್ಮ ವೃತ್ತಿಜೀವನದಲ್ಲಿಯೂ ಸಹ ಹೆಚ್ಚು ಸ್ಪಷ್ಟವಾಗಿ ಯಶಸ್ಸನ್ನು ಸಾಧಿಸುತ್ತಾರೆ ಎಂಬ ಸತ್ಯಾಂಶವನ್ನು ಸ್ಪಷ್ಟಪಡಿಸಿದೆ. ಆಧುನಿಕ ಕಾಲದ ಮಾನಸಿಕ ಆರೋಗ್ಯ ಮತ್ತು ಯೋಗ ಕ್ಷೇಮದ ತಜ್ಞರೂ ಸಹ, ಆರೋಗ್ಯಕರ, ಸಂತೋಷಕರ ಮತ್ತು ಸಾರ್ಥಕ ಜೀವನವನ್ನು ನಡೆಸಲು ಧ್ಯಾನವು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಪ್ರತಿಪಾದಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!