ಉದಯವಾಹಿನಿ, ಚಳಿಗಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವುದು ಮುಖ್ಯವಾದ ಕೆಲಸವಾಗಿದೆ. ಪೋಷಕರ ಚಿಕ್ಕ ನಿರ್ಲಕ್ಷ್ಯ, ಮೇಲ್ವಿಚಾರಣೆ ಕೊರತೆ ಸಹ ಮಕ್ಕಳಿಗೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮಕ್ಕಳ ಆಹಾರದಿಂದ ಹಿಡಿದು ಸ್ನಾನದವರೆಗೆ ಎಲ್ಲದರ ಬಗ್ಗೆಯೂ ಗಮನ ಹರಿಸುವುದು ಮುಖ್ಯವಾಗಿದೆ. ಚಿಕ್ಕ ತಪ್ಪು ಕೂಡ ಅವರ ಆರೋಗ್ಯಕ್ಕೆ ಮಾರಕವಾಗಬಹುದು. ಚಳಿಗಾಲದಲ್ಲಿ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವಾಗ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಚಳಿಗಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವಾಗ ಪರಿಗಣಿಸಬೇಕಾದ ವಿಷಯಗಳ ಬಗ್ಗೆ ತಿಳಿಯೋಣ.
ವಾರಕ್ಕೆ ಎಷ್ಟು ಬಾರಿ ಮಕ್ಕಳಿಗೆ ಸ್ನಾನ ಸಾಕು: ಜೈಪುರದ ಸಿ.ಕೆ. ಬಿರ್ಲಾ ಆಸ್ಪತ್ರೆಗಳ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ನಿರ್ದೇಶಕ ಡಾ.ಸಿ.ಪಿ. ದಧಿಚ್ ಅವರು ತಿಳಿಸುವ ಪ್ರಕಾರ, ಚಳಿಗಾಲದಲ್ಲಿ ಪ್ರತಿದಿನ ಮಕ್ಕಳಿಗೆ ಸ್ನಾನ ಮಾಡಿಸುವುದು ಅನಿವಾರ್ಯವಲ್ಲ. ಏಕೆಂದರೆ ಅವರ ದೇಹದ ಉಷ್ಣತೆಯು ಈಗಾಗಲೇ ಶೀತ ವಾತಾವರಣದಲ್ಲಿ ಕಡಿಮೆಯಾಗಿರುತ್ತದೆ. ನಿತ್ಯ ಸ್ನಾನ ಮಾಡುವುದರಿಂದ ಅವರ ಚರ್ಮ ಒಣಗುತ್ತದೆ. ಶೀತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ತಜ್ಞರು ಹೇಳುವ ಪ್ರಕಾರ, ಮಕ್ಕಳಿಗೆ ವಾರಕ್ಕೆ 2ರಿಂದ -3 ಬಾರಿ ಸ್ನಾನ ಮಾಡಿದರೆ ಉತ್ತಮ. ಆಗಾಗ್ಗೆ ಸ್ನಾನ ಮಾಡುವುದರಿಂದ ಮಕ್ಕಳ ಕೂದಲು ಮತ್ತು ಚರ್ಮದಿಂದ ನೈಸರ್ಗಿಕ ಎಣ್ಣೆ ಅಂಶದ ನಾಶವಾಗುತ್ತದೆ.
ಆಯುರ್ವೇದ ತಜ್ಞರು ತಿಳಿಸುವ ಪ್ರಕಾರ, ಪ್ರತಿ ಋತು ಹಾಗೂ ಪ್ರತಿಯೊಂದು ದೇಹದ ಪ್ರಕಾರವು ವಿಭಿನ್ನವಾಗಿರುತ್ತದೆ. ಚಳಿಗಾಲದಲ್ಲಿ ವಾತ ದೋಷ ಅಧಿಕವಾದರೆ, ದೇಹವು ಶೀತಕ್ಕೆ ಹೆಚ್ಚು ಸೂಕ್ಷ್ಮವಾಗುತ್ತದೆ. ಶೀತ ವಾತಾವರಣದಲ್ಲಿ ಸ್ನಾನ ಮಾಡುವುದರಿಂದ ವಾತ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಇದು ಒಣ, ಬಿರುಕು ಬಿಟ್ಟ ಚರ್ಮ, ಕೀಲು ನೋವು ಅಥವಾ ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಮಕ್ಕಳಿಗೆ ಪ್ರತಿದಿನ ಸ್ನಾನ ಮಾಡುವುದು ಅನಿವಾರ್ಯವಲ್ಲ. ತಜ್ಞರ ಪ್ರಕಾರ, ಶೀತ ವಾತಾವರಣದಲ್ಲಿ ವಾರಕ್ಕೆ 2-3 ಬಾರಿ ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಚರ್ಮದ ನೈಸರ್ಗಿಕ ಎಣ್ಣೆ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಮಕ್ಕಳ ಕೂದಲನ್ನು ಎಷ್ಟು ಬಾರಿ ತೊಳೆಯಬೇಕು?: ಚಳಿಗಾಲದಲ್ಲಿ ಮಕ್ಕಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾಡಿಸುವ ತಲೆ ಸ್ನಾನಕ್ಕಿಂತ ಕಡಿಮೆ ಬಾರಿ ಕೂದಲನ್ನು ತೊಳೆಯಬೇಕು. ಒಣ ಗಾಳಿಯು ಅವರ ಕೂದಲಿನ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುವುದನ್ನು ತಡೆಯಲು ಸಾಮಾನ್ಯವಾಗಿ ವಾರಕ್ಕೆ 1ರಿಂದ 2 ಬಾರಿ ತಲೆ ತೊಳೆಯಬೇಕು. ಮಗುವಿನ ಕೂದಲಿನ ಪ್ರಕಾರ, ವಯಸ್ಸು ಮತ್ತು ಚಟುವಟಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ. ಒಂದು ವರ್ಷದೊಳಗಿನ ಚಿಕ್ಕ ಮಕ್ಕಳು ಮತ್ತು ಶಿಶುಗಳ ನೆತ್ತಿಯು ತುಂಬಾ ಸೂಕ್ಷ್ಮವಾಗಿರುತ್ತದೆ. ಅವರ ಕೂದಲನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ತೊಳೆಯಬೇಕು.
