ಉದಯವಾಹಿನಿ, ನ್ಯೂಯಾರ್ಕ್: ದಕ್ಷಿಣ ಚೀನಾ ಮಹಾಸಾಗರದಲ್ಲಿನ ವಿಷಮಸ್ಥಿತಿ ಹಾಗೂ ತೈವಾನ್ ವಿಚಾರದಲ್ಲಿ ಚೀನಾ ತೋರುತ್ತಿರುವ ನಡೆಯ ವಿಚಾರದಲ್ಲಿ ಅಮೆರಿಕಾ ಹಾಗೂ ಚೀನಾ ನಡುವಿನ ಸಂಬಂಧದವು ತೀರಾ ಹದಗೆಟ್ಟಿದೆ. ಇದೇ ನಡುವೆ ಇದೀಗ ನ್ಯೂಯಾರ್ಕ್‌ನಲ್ಲಿ ಎರಡೂ ದೇಶಗಳ ನಾಯಕರು ಭೇಟಿ ಮಾಡಿದ್ದು, ಪರಸ್ಪರ ಸ್ಥಿರತೆ ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ ಅಮೆರಿಕಾ ಹಾಗೂ ಚೀನಾ ನಡುವೆ ಶೀತಲ ಸಮರ ಸಮರ ನಡೆಯುತ್ತಿದ್ದು, ಇದೇ ನಡುವೆ ತೈವಾನ್ ವಿಚಾರದಲ್ಲಿ ಕೂಡ ವಿವಾದ ಉಲ್ಬಣಿಸಿದೆ. ಮೂಲಗಳ ಪ್ರಕಾರ ಮುಂದಿನ ಎರಡು ವರ್ಷದಲ್ಲಿ ತೈವಾನ್ ಮೇಲೆ ಚೀನಾ ದಾಳಿ ನಡೆಸಿ, ವಶಪಡಿಸಿಕೊಳ್ಳಲಿದೆ ಎಂದೇ ಹೇಳಲಾಗಿದೆ. ಇದರ ನಡುವೆ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಥನಿ ಬ್ಲಿಂಕೆನ್ ಹಾಗೂ ಚೀನಾ ಉಪಾಧ್ಯಕ್ಷ ಹಾನ್ ಝೆಂಗ್ ನಡುವೆ ಭೇಟಿದ ನಡೆದಿದ್ದು, ಎಲ್ಲರ ಗಮನ ಸೆಳೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಲಿಂಕೆನ್, ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಾನು ಮುಖಾಮುಖಿ ರಾಜತಾಂತ್ರಿಕತೆಯಲ್ಲಿ ನಂಬಿಕೆ ಹೊಂದಿದ್ದೇನೆ. ನಮ್ಮ ದೇಶಗಳು ಹೊಂದಿರುವ ಇತ್ತೀಚಿನ ಉನ್ನತ ಮಟ್ಟದ ಪಾಲ್ಗೊಳ್ಳುವಿಕೆಯ ಮೇಲೆ ಈ ಅವಕಾಶ ಸಿಕ್ಕಿರುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಜಗತ್ತಿನ ಎರಡು ಅತೀ ದೊಡ್ಡ ಆರ್ಥಿಕತೆಗಳು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದೆ. ಜಗತ್ತಿಗೆ ಆರೋಗ್ಯಕರ ಮತ್ತು ಸ್ಥಿರವಾದ ಯುಎಸ್-ಚೀನಾ ಸಂಬಂಧಗಳ ಅಗತ್ಯವಿದೆ, ಇದು ಚೀನಾ ಮತ್ತು ಯುಎಸ್‌ಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!