ಉದಯವಾಹಿನಿ, ನ್ಯೂಯಾರ್ಕ್ಜ: ಗತ್ತಿನ ಅತ್ಯಾಧುನಿಕ ಯುದ್ದ ವಿಮಾನಗಳ ಪೈಕಿ ಅಗ್ರಸ್ಥಾನದಲ್ಲಿರುವ ಅಮೆರಿಕಾದ ಎಫ್-೩೫ ವಿಮಾನದ ನಿಗೂಢ ಕಣ್ಮರೆ ಪ್ರಕರಣ ಇದೀಗ ಸುಖಾಂತ್ಯಗೊಂಡಿದೆ. ನಾಪತ್ತೆಯಾಗಿದ್ದ ವಿಮಾನದ ಅವಶೇಷಗಳು ಇದೀಗ ಕೆರೊಲಿನಾದಲ್ಲಿ ಪತ್ತೆಯಾಗಿದೆ.
ಒಂದು ಯುದ್ದ ವಿಮಾನವೇ ಬರೊಬ್ಬರಿ ೮೦೦ ದಶಲಕ್ಷ ಡಾಲರ್ (ಸುಮಾರು ೭೦೦೦ ಕೋ.ರೂ.) ಮೌಲ್ಯ ಹೊಂದಿದ್ದು, ಜಗತ್ತಿನ ಅತ್ಯಾಧುನಿಕ ವಿಮಾನವೆಂದೇ ಪರಿಗಣಿಸಲ್ಪಟ್ಟಿದೆ. ಆದರೆ ದಿನಗಳ ಹಿಂದೆ ವಿಮಾನದಲ್ಲಿ ದೋಷ ಕಾಣಿಸಿಕೊಂಡಿದ್ದು, ಕೂಡಲೇ ಪೈಲೆಟ್ ವಿಮಾನದಿಂದ ಹಾರಿ ತಪ್ಪಿಸಿಕೊಂಡಿದ್ದ. ಆದರೆ ಯುದ್ದ ವಿಮಾನವು ಆಟೋ ಪೈಲೆಟ್ ಸ್ಥಿತಿಯಲ್ಲಿ ಹಾರಾಡಿ ಕಣ್ಮರೆಯಾಗಿತ್ತು. ಇದೀಗ ಯುದ್ದ ವಿಮಾನವು ಕೆರೊಲಿನಾದ ವಿಲಿಯಮ್ಸ್‌ಬರ್ಗ್ ಕೌಂಟಿಯಲ್ಲಿ ಪತ್ತೆಯಾಗಿದೆ ಎಂದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಇದು ಸಮೀಪದಲ್ಲಿರುವ ಜಾಯಿಂಟ್ ಬೇಸ್ ಚಾರ್ಲ್ಸ್‌ಟನ್ (ಜೆಬಿಸಿ) ಈಶಾನ್ಯಕ್ಕೆ ಎರಡು ಗಂಟೆಗಳ ಕಾಲ ದೂರವಿದೆ ಎನ್ನಲಾಗಿದೆ. ಇನ್ನು ಎಫ್-೩೫ ಯುದ್ದ ವಿಮಾನವನ್ನು ರಾಡಾರ್‌ನಿಂದ ಪತ್ತೆ ಹಚ್ಚುವುದು ಬಹುತೇಕ ಅಸಾಧ್ಯವೆಂದೇ ಹೇಳಲಾಗುತ್ತದೆ. ಹಾಗಾಗಿ ಇದನ್ನು ವಿಶ್ವದ ಅತ್ಯಾಧುನಿಕ ಯುದ್ದ ವಿಮಾನವೆಂದು ಗುರುತಿಸಲಾಗುತ್ತದೆ.
