
ಉದಯವಾಹಿನಿ ಇಂಡಿ : ತಾಂಬಾ ಗ್ರಾಮದ ಆರಾಧ್ಯ ದೇವರು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನದಲ್ಲಿ ಸ್ವಾಮಿ ಕತೃ ಲಿಂಗಕ್ಕೆ ಒಂದು ತಿಂಗಳು ಕಾಲ ರುದ್ರಾಭಿಷೇಕ ಮಾಡಿ ಇಂದು ವಿಶೇಷ ಪೂಜೆ ಹಾಗೂ ಗಣೇಶ್ ಮೂರ್ತಿ ಪ್ರತಿಷ್ಟಾಪನೆ ಮಾಡಿ ನಂತರ ಶ್ರಾವಣ ಮಾಸದ ಮುಕ್ತಾಯ ಪರ್ವ ಕಾರ್ಯಕ್ರಮವು ಗ್ರಾಮದ ವೀರಭದ್ರೇಶ್ವರ ಭಜನಾ ಕಲಾ ತಂಡ ಹಾಗೂ ಗುಳಿ ಬಸವೇಶ್ವರ ಕಲಾ ತಂಡದ ವಿಶೇಷ ಭಜನೆ ಕಾರ್ಯಕ್ರಮದೊಂದಿಗೆ ನೇರೆವೆರಿತು.ಈ ಭಜನೆ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ದೇವಸ್ಥಾನದ ಕಮಿಟಿಯ ಪ್ರಧಾನ ಕಾರ್ಯದರ್ಶಿ ಶಿವರಾಜ್ ಕೆಂಗನಾಳ ಹಾಗೂ ದೇವಸ್ಥಾನ ಕಮಿಟಿ ಕಾರ್ಯದರ್ಶಿ ಗೋಪಾಲ ಅವರಾದಿ ಕೂಡಿ ಧಮಡೆ, ಪೇಟಿ ಭಾರಿಸುವ ಮುಖಾಂತರ ಚಾಲನೆ ನೀಡಿದರು, ಈ ಸಮಯದಲ್ಲಿ ಭಕ್ತರು ಹಾಗೂ ಮುದ್ದು ಮಕ್ಕಳು ಇದ್ದರು.
