
ಉದಯವಾಹಿನಿ ಸವದತ್ತಿ:ತಾಲೂಕಿನ ಉಗರಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ/ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ/ಸವದತ್ತಿ. ತಾಲೂಕು ಪಂಚಾಯತ್ ಸವದತ್ತಿ ಗ್ರಾಮ ಪಂಚಾಯತ್ ಕಾರ್ಯಾಲಯ ಉಗರಗೋಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಉಗರಗೋಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಸದರಿ ಕಾರ್ಯಕ್ರಮವನ್ನು ಪಿಡಿಓ ಮಹೇಶ್ ತೆಲಗಾರರವರು ಉದ್ಘಾಟಿಸಿ ರಕ್ತ ದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಟಿಎಚ್ಓ ಶ್ರೀಪಾದ ಸಬನೀಸ ಡಾಕ್ಟರ್ ಜ್ಯೋತಿ ಬಸರಿ ಆನಂದ ಕುಮಾರ ಮೂಗಬಸವ ಎ ಕೆ ಮುಲ್ಲಾ ಎನ್ ಎ ಪೂಜೇರ ಈರಯ್ಯ ದಿಗಂಬರಮಠ ಶ್ರೀದೇವಿ ಪವಾರ ರಮೇಶ್ ಗೋವನ್ನವರ ಮೆಹಬೂಬ್ ದಪೇದಾರ ಸಂಗೀತಾ ಗ್ರಾಮ ಪಂಚಾಯತ್ ಸದಸ್ಯರಾದ ವಿಠ್ಠಲ ಸಿದ್ಧಕ್ಕನ್ನವರ ಬಿಮ್ಸ್ ಬೆಳಗಾವಿ ಸಿಬ್ಬಂದಿ ವರ್ಗದವರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಅತೀ ಉತ್ಸಾಹದಿಂದ ಗ್ರಾಮದ ಯುವಕರು ಸದರಿ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ರಾಜೇಂದ್ರ ಚಿಟ್ನಿಸ್ ಸ್ವಾಗತಿಸಿದರು ನಿಂಗಣ್ಣ ಎಚ್ ಕಾರ್ಯಕ್ರಮ ನಡೆಸಿಕೊಟ್ಟರು.
