
ಉದಯವಾಹಿನಿ ಅಫಜಲಪುರ : ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ,ಏಕಾಗ್ರತೆ, ನಿರಂತರ ಪ್ರಯತ್ನ ಪರಿಶ್ರಮ ಪಟ್ಟರೆ ಮಾತ್ರ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಬರುತ್ತದೆ.ಎಂದು ಖ್ಯಾತ ಮನೋವಿಜ್ಞಾನಿ ಡಾ ಸಿ ಆರ್ ಚಂದ್ರಶೇಖರ ಹೇಳಿದರು ಅವರು ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯತಿ ಸರ್ಕಾರಿ ಪ್ರೌಢಶಾಲೆ ಹಾಗೂ ನೆಹರು ಯುವಕ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿ ಮನಸ್ಸು ನಮ್ಮ ಎಲ್ಲ ಕಾರ್ಯಗಳ ಬಹು ಮುಖ್ಯ ಅಂಶವಾಗಿದೆ. ದೈಹಿಕ ಮಾನಸಿಕ ಆರೋಗ್ಯದ ಜೊತೆಗೆ ಕ್ರಿಯಾತ್ಮಕ ಚಟುವಟಿಕೆಗಳು ಕೈಗೊಳ್ಳುವಂತೆ ಪ್ರೇರೇಪಿಸಬೇಕು.ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು.ಧ್ಯಾನದಿಂದ ಏಕಾಗ್ರತೆ ಹೆಚ್ಚಾಗುತ್ತದೆ.ಚಂಚಲ ಮನಸ್ಸು ಏಕಾಗ್ರತೆ ಹೊಂದುತ್ತದೆ.ಏಕಾಗ್ರತೆಯಿಂದ ಓದಿದಾಗ ಮಾತ್ರ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.ವಿದ್ಯಾರ್ಥಿಗಳು ಮುಖ್ಯವಾಗಿ ಶಿಸ್ತು ಶ್ರದ್ಧೆ,ಸಮಯ ಪ್ರಜ್ಞೆ, ರೂಢಿಸಿಕೊಳ್ಳಬೇಕು.ಮನಸ್ಸು ಕೊಟ್ಟು ಓದಿ.ಎಲ್ಲಾ ವಿಷಯಗಳಲ್ಲೂ ಆಳವಾದ ಜ್ಞಾನ ಹೊಂದಿ. ಅನುಮಾನಗಳನ್ನು ಬಗೆಹರಿಸಿಕೊಂಡು ವಿಷಯದ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಬೇಕು.ಅಂದಾಗ ಮಾತ್ರ ನೀವು ಪರೀಕ್ಷೆಗಳನ್ನು ಯಾವುದೇ ರೀತಿಯ ಅಂಜಿಕೆ, ಆತಂಕ ಇಲ್ಲದೇ ನಿರ್ಭಯವಾಗಿ ಎದುರಿಸಲು ಸಾಧ್ಯ.ಸರ್ವ ಸಮಸ್ಯೆಗಳಿಗೆ ಕಾರಣವಾಗುವ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದನ್ನು ಎಲ್ಲರೂ ಅರಿತಿರಬೇಕು. ಮನೆಯಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ದುರ್ನಡತೆ, ಅತಿಯಾದ ಹಠ, ಅನವಶ್ಯಕ ಜಿದ್ದು ಮಾಡಿದಾಗ ಮಾನಸಿಕವಾಗಿ, ಪ್ರೀತಿಯಿಂದ ತಿದ್ದಿ ಸಮಾಧಾನದಿಂದ ಮಾತನಾಡುವ ಮೂಲಕ ಅವರಲ್ಲಿ ಅರಿವು ಮೂಡಿಸಬೇಕು.ಇಂದು ಯುವಜನಾಂಗ ಬಹುತೇಕ ಖಿನ್ನತೆಯಿಂದ ಬಳಲುತ್ತಿದೆ. ಅವರಿಗೆ ಸೂಕ್ತ ತಿಳುವಳಿಕೆ ನೀಡುವ ಅವಶ್ಯಕತೆಯಿದೆ. ಧ್ಯಾನದಿಂದ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಇದರಿಂದ ಚಂಚಲವಾದ ಮನಸ್ಸು ಏಕಾಗ್ರಗೊಳ್ಳುತ್ತದೆ ಎಂದು
ಹೇಳಿದರು. ಇದೇ ಸಂದರ್ಭದಲ್ಲಿ ಡಾ ಸಿ ಆರ್ ಚಂದ್ರಶೇಖರ ಅವರು ಬರೆದಿರುವ ಪರಿಕ್ಷಾ ಸಂಭ್ರಮ ಪುಸ್ತಕ ಬಿಡುಗಡೆ ಮಾಡಲಾಯಿತು.ಹಾಲಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.ಎಸ್ ಎಸ್ ಹಿರೇಮಠ ಬಿ ಎಸ್ ದೇಸಾಯಿ ಪತ್ರಕರ್ತ ಶೇಷಮೂರ್ತಿ ಅವಧಾನಿ ಗ್ರಾ ಪಂ ಸದಸ್ಯರಾದ ಬಸವರಾಜ ವಾಯಿ ಹಣಮಂತ ನಾವಾಡಿ ಶ್ರೀಶೈಲ ಚಾಂಬರ ಮುಖಂಡರಾದ ಚಂದ್ರಕಾಂತ ದೈತನ ಶರಣು ತಾರಾಪೂರ ವಿಠ್ಠಲ ಅಲ್ಲಾಪೂರ ಅಪ್ಪಾಸಾಬ ಹೊಸೂರಕರ ಮಲಕಣ್ಣ ಹೊಸೂರಕರ ಮಹಾದೇವ ಪ್ಯಾಟಿ ಗುಳುರಾಯ ಬುರುಡ ಮುಖ್ಯ ಗುರು ಸುರೇಶ ಕೋರಚಗಾಂವ ಪದವಿ ಪೂರ್ವ ಕಾಲೇಜ ಪ್ರಾಂಶುಪಾಲ ಶಾಂತರಸ ಹೊಸಮನಿ ಸರ್ಕಾರಿ ಮಾದರಿ ಶಾಲೆ ಮುಖ್ಯ ಗುರು ವಿಶ್ವನಾಥ ರೋಡಗಿ ಪತ್ರಕರ್ತ ಶಿವಲಿಂಗೇಶ್ವರ ಜಾಲವಾದಿ ಸೇರಿದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಪ್ರೌಢಶಾಲೆ ಮಾದರಿ ಶಾಲೆ ಉರ್ದು ಶಾಲೆ ಸರ್ವ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿದ್ದರು
