ಉದಯವಾಹಿನಿ, ಅಫಜಲಪುರ :ತಾಲೂಕಿನ ಅಳ್ಳಗಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳುಗಳ ಕಾಲ ಪ್ರತಿದಿನ ನಾಗಲಿಂಗಯ್ಯ ಶಾಸ್ತ್ರಿಗಳಿಂದ ಪುರಾಣ ಕಾರ್ಯಕ್ರಮ ನಡೆಯಿತು. ಶ.ಭ್ರ.ಶಾಂತಲಿಂಗ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಕಾಶಿ ಜದ್ಗುರುಗಳ ಅಡ್ಡ ಪಲ್ಲಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.ನಂತರ ಮಾತನಾಡಿದ ಶ್ರೀಮಠದ ಮಠಾಧಿಶರಾದ ಶಾಂತಲಿಂಗ ಶಿವಾಚಾರ್ಯರು,ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಮದ್ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುತ್ತೈದೆಯರ ಕಳಸಾರೋಹಣದೊಂದಿಗೆ ಹಲವು ವಾದ್ಯಗಳೊಂದಿಗೆ ಅದ್ದೂರಿಯಾಗಿ ಜರಗಿತು ಎಂದು ತಿಳಿಸಿದರು.ನಂತರ ಮಾತನಾಡಿದ ಕಾಶಿ ಜಗದ್ಗುರು ಅಳ್ಳಗಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಶ್ರಾವಣ ಮಾಸದ ನಿಮಿತ್ಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತ ಬಂದಿದ್ದು, ಗ್ರಾಮದಲ್ಲಿ ಎಲ್ಲಾ ಜನರು ಪ್ರತಿನಿತ್ಯ ಪುರಾಣ ಕಾರ್ಯಕ್ರಮ ಆಲಿಸಿದ್ದು ಸಂತಸ ತಂದಿದೆ ಅಡ್ಡ ಪಲ್ಲಕ್ಕಿ ಉತ್ಸವ ಮಾಡಿದ್ದು ಇದು ಎರಡನೇ ಬಾರಿ ನಾನು ನಿಮ್ಮ ಗ್ರಾಮಕ್ಕೆ ಬಂದಿದ್ದು, ಬಹಳ ಸಂತಸ ತಂದಿದೆ ಈ ನಾಡಿನಲ್ಲಿ ಮಳೆ ಬೆಳೆ ಸರಿಯಾಗಿ ಬಂದು ರೈತರು ದೊಡ್ಡ ಮಟ್ಟದಲ್ಲಿ ಬೆಳೆಗಳು ಬೆಳೆಯಲಿ ನಾಡಿನ ಜನತೆಗೆ ಒಳ್ಳೆಯದಾಗಲಿ  ಈ ಶ್ರೀಮಠ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಶ್ರೀ ಮಠಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಒಗ್ಗಟ್ಟಿನಿಂದ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ಈ ಮಠವು ನಿಮ್ಮದೆಂದು ತಿಳಿದು ಎಲ್ಲರೂ  ಮಠವನ್ನು ಬೆಳೆಸುವಲ್ಲಿ ಯಶಸ್ವಿಯಾಗಿರಿ ಎಲ್ಲರಿಗೂ ಭಗವಂತ ಒಳ್ಳೇದು ಮಾಡಲಿ ಎಂದು ಆಶೀರ್ವದಿಸಿದರು ಇದೆ ಸಂದರ್ಭದಲ್ಲಿ ಚಿನ್ಮಯಗಿರಿ ಶ್ರೀಗಳು ಅತನೂರು ಶ್ರೀಗಳು ತೋಳನೂರ ಶ್ರೀಗಳು ಗೌರ ಬಿ ಗ್ರಾಮದ ಶ್ರೀಗಳು ಶಾಸಕರ ಸಹೋದರರಾದ ಎಸ್ ವೈ ಪಾಟೀಲ್ ಗ್ರಾಮದ ಮುಖಂಡರಾದ ನಾನಾಗೌಡ ಪೊಲೀಸ್ ಪಾಟೀಲ, ಸಾಯಬಗೌಡ ಪಾಟೀಲ ಸೇರಿದಂತೆ ಸಮಸ್ತ ಅಳ್ಳಗಿ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!