ಉದಯವಾಹಿನಿ, ಲಕ್ನೋ: ನಾಲ್ಕು ವರ್ಷ ನನ್ನ ಜೊತೆ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಈಗ ಬೇರೊಬ್ಬಳನ್ನು ವಿವಾಹವಾಗಿದ್ದಾರೆಂದು ಆರೋಪಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ತಾಜ್‌ಗಂಜ್ ಪೊಲೀಸ್ ಠಾಣೆಯ ಜೆ.ವಿ. ಗೌತಮ್ ನಾಲ್ಕು ವರ್ಷಗಳಿಂದ ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವ ಭರವಸೆ ನೀಡಿ ಆತ ನನ್ನನ್ನು ಹೆಂಡತಿಯಂತೆ ಇಟ್ಟುಕೊಂಡಿದ್ದ. ನಂತರ ಮದುವೆಯಾಗಲು ನಿರಾಕರಿಸಿದ ಎಂದು ಆರೋಪಿಸಿದ್ದರು.
ಈ ಅವಧಿಯಲ್ಲಿ ತಾನು ದೈಹಿಕ ಮತ್ತು ಮಾನಸಿಕ ಶೋಷಣೆಗೆ ಒಳಗಾಗಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ, ಏನೂ ಮಾಡಲು ಸಾಧ್ಯವಿಲ್ಲ ಮತ್ತು ಕಾನ್‌ಸ್ಟೆಬಲ್ ಕ್ರಮದಿಂದ ಬಚಾವ್‌ ಆಗ್ತಾರೆ ಎಂದು ಹೇಳಲಾಗಿತ್ತು.
ಕಾನ್‌ಸ್ಟೆಬಲ್ ತನ್ನ ಕುಟುಂಬದವರು ತಮ್ಮ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಗೌತಮ್ ಮತ್ತು ಅವನ ಕುಟುಂಬವು ನನಗೆ ಹಿಂಸೆ ನೀಡಿದೆ. ಮಾನಸಿಕವಾಗಿ ತೊಂದರೆ ನೀಡಿದೆ. ನಾಲ್ಕು ವರ್ಷಗಳ ಕಾಲ ನನ್ನೊಂದಿಗೆ ವಾಸಿಸಿದ್ದ. ಅವನು ಈಗ ಇನ್ನೊಬ್ಬಳನ್ನು ಮದುವೆಯಾಗಲು ತಯಾರಿ ನಡೆಸುತ್ತಿದ್ದಾನೆ ಎಂದು ಆತ್ಮಹತ್ಯೆಗೂ ಮುನ್ನ ಮಹಿಳಾ ವಿಡಿಯೋ ಮಾಡಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!