
ಉದಯವಾಹಿನಿ ಸಿಂಧನೂರು: ತಾಲೂಕಿನ ರಾಜೀವ್ ನಗರ ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸಿದ್ದರಾಮಪ್ಪ ಮುಖ್ಯ ಗುರುಗಳು ಹಾಗೂ ಸ್ವಾಮಿ H.S ಸಹ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಶಾಲಾಭಿವೃದ್ದಿ ಹಾಗೂ ಸಮಿತಿ ವತಿಯಿಂದ ಅದ್ದೂರಿಯಾಗಿ ನೆರವೇರಿತು. ಊರಿನ ಗ್ರಾಮಸ್ಥರಿಂದ ಭಾವನಾತ್ಮಕವಾಗಿ ಶಿಕ್ಷಕರನ್ನು ಬೀಳ್ಕೊಡಲಾಯಿತು. ಕಾರ್ಯಕ್ರಮದ ನೀರೂಪಣೆಯನ್ನು ಶಿಲ್ಪಾ ಶಿಕ್ಷಕಿ ಹಾಗೂ ವಂದನಾರ್ಪಣೆಯನ್ನು ಶರಣಬಸವ ಕೆ.ಹೊಸಹಳ್ಳಿ ಶಿಕ್ಷಕರು ನೆರವೇರಿಸಿದರು.ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಸಿದ್ದರಾಮಪ್ಪ ಮಾತನಾಡಿ ನಾನು 2007 ರಿಂದ ಇಲ್ಲಿಯವರೆಗೆ ಇದೇ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ.ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಕಲಿಕೆಗೆ ಅನುಗುಣವಾಗಿ ಶಿಕ್ಷಣವನ್ನು ನೀಡಬೇಕು,ಯಾವುದೇ ರೀತಿಯ ಒತ್ತಡಗಳನ್ನು ಹೇರದೆ ಪ್ರೀತಿಯಿಂದ ಶಿಕ್ಷಣ ಕಲಿಸಿದಾಗ ಮಾತ್ರ ಶಿಕ್ಷಣ ಆ ಮಗುವಿನ ಅಂತರಾಳದಲ್ಲಿ ಉಳಿದು ಮುಂದೊಂದು ದಿನ ಅವರ ಭವಿಷ್ಯ ಉಜ್ವಲವಾಗಿ ಹೊರಹೊಮ್ಮುತ್ತದೆ ಇದೇ ಶಿಕ್ಷಕರಿಗೆ ವಿದ್ಯಾರ್ಥಿಗಳು ಕೊಡುವ ಉಡುಗೊರೆ ಇದಕ್ಕಿಂತ ಉಡುಗೊರೆ ಮೊತ್ತೊಂದಿಲ್ಲ ಅದೇರೀತಿಯಾಗಿ ಶಾಲೆಯಲ್ಲಿ ನಾನು ಸೇವೆ ಸಲ್ಲಿಸುವಾಗ ನನಗೆ ಮಾರ್ಗದರ್ಶನ ನೀಡಿದ ಹಾಗೂ ಸಹಕಾರ ನೀಡಿದ ಎಲ್ಲ ಊರಿನ ಹಿರಿಯರಿಗೆ SDMC ಸದಸ್ಯರಿಗೆ,ಹಳೆಯ ವಿದ್ಯಾರ್ಥಿಗಳಿಗೆ,ಶಿಕ್ಷಕರುಗಳಿಗೆ ಹೃದಯ ಪೂರ್ವಕ ದನ್ಯವಾದಗಳು ಎಂದು ತಿಳಿಸಿದರು.ನಂತರ ಸಹ ಶಿಕ್ಷಕ ಸ್ವಾಮಿ H.S ಮಾತನಾಡಿ ನನ್ನ ಶಿಕ್ಷಕ ವೃತ್ತಿಯಲ್ಲಿ ಇಂತಹ ಒಂದು ಶಾಲೆಯನ್ನು ಎಲ್ಲಿ ಕಂಡಿರಲಿಲ್ಲ ಇಲ್ಲಿನ ವಿದ್ಯಾರ್ಥಿಗಳು, ಪಾಲಕರು,ಪೋಷಕರು SDMCಸದಸ್ಯರು ಎಲ್ಲರೂ ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿದ್ದಾರೆ ಎಲ್ಲರಿಗೂ ಚಿರ ಋಣಿ ಎಂದರು.ಈ ಸಂದರ್ಭದಲ್ಲಿ ಶಾಲೆಯSDMC ಅದ್ಯಕ್ಷರು ಪದಾಧಿಕಾರಿಗಳು, ಊರಿನ ಹಿರಿಯರು ಯುವಕರು, ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.
