ಉದಯವಾಹಿನಿ ಸಿರುಗುಪ್ಪ : ಈದ್‌ಮಿಲಾದ್ ಹಬ್ಬದ ಮೆರವಣಿಗೆ ಹಾಗೂ ವಿಶ್ವ ಹಿಂದೂಪರಿಷತ್ ವತಿಯಿಂದ ನಡೆಯುವ ಗಣೇಶ ವಿಸರ್ಜನೆ, ಶೋಭಾಯಾತ್ರೆ ನಿಮಿತ್ತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜೀತ್‌ಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ಸಂಜೆ ಪೋಲೀಸ್ ಪಥಸಂಚಲನ ನಡೆಯಿತು.ನಗರದ ತಾಲೂಕು ಕ್ರೀಡಾಂಗಣದಿ0ದ ಶ್ರೀ ಕನಕದಾಸ ವೃತ್ತ, ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಶ್ರೀ ಅಂಬಿಗರ ಚೌಡಯ್ಯ ವೃತ್ತ, ಕೊಟ್ಟೂರೇಶ್ವರ ದೇವಸ್ಥಾನ, ಟಿಪ್ಪು ಸುಲ್ತಾನ ವೃತ್ತಗಳ ಮೂಲಕ ಪೋಲೀಸ್ ಇಲಾಖೆ ಮತ್ತು ಗೃಹರಕ್ಷಕ ದಳದಿಂದ ಪಥಸಂಚಲನ ಸಾಗಿ ಠಾಣೆಯಲ್ಲಿ ಮುಕ್ತಾಯವಾಗಿತು.ನಂತರ ಎಸ್.ಪಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಗರದಲ್ಲಿ ಮುಂಜಾಗ್ರತೆಯಾಗಿ ಸೂಕ್ತ ಪೋಲೀಸ್ ಬಂದೋಬಸ್ತ್ ಅಳವಡಿಸಲಾಗಿದೆ.ಸಾರ್ವಜನಿಕರು ಕಿಡಿಗೇಡಿಗಳ ಮಾತಿಗೆ ಕಿವಿಗೊಡದೇ ಸಂಭ್ರಮದಿ0ದ ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಪರಸ್ಪರ ಸಾಮರಸ್ಯದಿಂದ ಹಬ್ಬವನ್ನು ಆಚರಿಸವುದರೊಂದಿಗೆ ಭಾವೈಕ್ಯತೆ ಮೆರೆಯಬೇಕು.ನಮ್ಮ ಸಿಬ್ಬಂದಿಗಳು ನಿರ್ಲಕ್ಷö್ಯವಹಿಸದೇ ನಿಗಾವಹಿಸಿ ಭದ್ರತೆಯ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಇದೇ ವೇಳೆ ಎಎಸ್‌ಪಿ ಕೆ.ಪಿ.ರವಿಕುಮಾರ್, ಡಿವೈಎಸ್‌ಪಿ ಎಸ್.ಟಿ.ಒಡೆಯರ್, ಚಂದ್ರಕಾ0ತ ನಂದರೆಡ್ಡಿ, ಸಿಪಿಐ. ಸುಂದ್ರೇಶ್ ಹೊಳೆಣ್ಣನವರ್, ಉಮೇಶ್.ಎಮ್, ಗೋವಿಂದ.ಎ0, ಸತೀಶ್, ಪಿ.ಎಸ್.ಐ ಶಶಿಧರ, ಕಾಳಿಂಗ, ಶಾಂತಮೂರ್ತಿ, ಸದ್ದಾಂಹುಸೇನ್, ಸಂತೋಷ ಹಾಗೂ ಪೋಲೀಸ್ ಮತ್ತು ಗೃಹ ರಕ್ಷಕದಳದ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!