
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಗಾರಂಪಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷ ಪವನಕುಮಾರ ಪಾಟೀಲ,ಉಪಾಧ್ಯಕ್ಷೆ ಶಕುಂತಲಾ ಸೋಮಶೇಖರ ಹಾಗೂ ಪಿಡಿಒಗೆ ಯಲಗೊಂಡ ಪೂಜಾರಿಯವರಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ,ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರು ಗಾಂಧಿ ಗ್ರಾಮ ಪ್ರಶಸ್ತಿ ಪ್ರದಾನ ಮಾಡಿದರು.ಬೆಂಗಳೂರಿನ ಬ್ಯಾಂಕ್ಟೆಟ್ ಹಾಲ್ ನಲ್ಲಿ ರಾಜ್ಯದ ಗ್ರಾಪಂ.ಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಪಂ.ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಪಿಡಿಒಗಳಿಗೆ ಮುಖ್ಯಮಂತ್ರಿಗಳು,ಡಿಸಿಎಂ ಸೇರಿದಂತೆ ಸಚಿವರು,ಗಾಂಧಿ ಗ್ರಾಮ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಚಿವರು,ಶಾಸಕರು,ಗ್ರಾಪಂ.ಸದಸ್ಯರು, ಸೇರಿದಂತೆ ಅನೇಕರಿದ್ದರು.
