
ಉದಯವಾಹಿನಿ,ಚಿಂಚೋಳಿ: ಆರೋಗ್ಯಕರ ಜೀವನಕ್ಕಾಗಿ ರೈತರು ಎಣ್ಣೆಕಾಳು ಬೆಳೆಗಳಾದ ಕುಸುಬಿ,ಸೂರ್ಯಾಕಾಂತಿ,ಸೇಂಗಾದಂತಹ ಬೆಳೆಗಳು ಬೆಳಸಲು ರೈತರು ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೇಟ್ಟಿ ರಾಠೋಡ್ ರೈತರಿಗೆ ಮನವಿ ಮಾಡಿದ್ದಾರೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಂಗಡಿಗಳಲ್ಲಿ ಖರೀದಿ ತಿನ್ನುವ ಎಣ್ಣೆಗಳಿಂದ ಜನರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ನೈಸರ್ಗಿಕವಾಗಿ ರೈತರು ಬೆಳೆಯುವ ಸೂರ್ಯಕಾಂತಿ,ಸೇಂಗಾ,ಕುಸುಬಿ ಅಂತಹ ಬೆಳೆಗಳು ಬೆಳೆಸಿ ಇದರ ಎಣ್ಣೆಯನ್ನು ಊಟಕ್ಕೆ ಉಪಯೋಗಿಸಿಕೊಂಡು ಜನರು ಯಾವುದೇ ರೋಗಕ್ಕೆ ತುತ್ತಾಗದಂತೆ ಆರೋಗ್ಯವಂತರಾಗಿರಬೇಕು.
ಜೋಳ ಮತ್ತು ಕಡಲೆ ಬಿತ್ತುವ ಗುರಿ:- ತಾಲ್ಲೂಕಿನಾದ್ಯಂತ 12ಸಾವಿರ ಹೇಕ್ಟರ್ ಭೂಮಿಯನ್ನು ಜೋಳ ಬಿತ್ತುವ ಹಾಗೂ 15,500ಹೇಕ್ಟರ್ ಕಡಲೆ,1.50ಹೇಕ್ಟರ್ ಸೂರ್ಯಾಕಾಂತಿ,ಸೇಂಗಾ 35ಹೇಕ್ಟರ್, ಕುಸುಬಿ 400ಹೇಕ್ಟರ್ ಭೂಮಿಯನ್ನು ಬಿತ್ತುವ ಗುರಿ ಹೊಂದಲಾಗಿದೆ. ಈ ವರ್ಷ ಹೆಚ್ಚು ಮಳೆ ಆಗಿರುವುದರಿಂದ ರೈತರ ಬೆಳೆ ಹಾನಿಯಾಗಿದೆ,ರೈತರ ಗುರಿ ಇನ್ನು ಹೆಚ್ಚಾಗಬಹುದು,ಆದರೆ ರೈತರ ಬೇಡಿಕೆಯಂತೆ ಇನ್ನು ಹೆಚ್ಚಿನ ಬೀಜ ತಂದುಕೊಡಲಾಗುವುದು.
ಜೋಳ-ಕಡಲೆ ಬೀಜ ವಿತರಣೆ,ದಾಸ್ತಾನು ರೈತರು ಖರೀದಿಸಿ; ರಾಠೋಡ್
ಚಿಂಚೋಳಿ ಬೀಜೋತ್ವಾದನಾ ಕೇಂದ್ರ: 50ಕ್ಟೀಂಟಲ್ ಕಡಲೆ,ಜೋಳ 6.50ಕ್ಟೀಂಟಲ್ ಜೋಳ ದಾಸ್ತಾನು,ಸುಲೇಪೇಟ: 50ಕ್ಟೀಂಟಲ್ ಕಡಲೆ,ಜೋಳ 6.50ಕ್ಟೀಂಟಲ್,ಕೋಡ್ಲಿ:50ಕ್ಟೀಂಟಲ್ ಕಡಲೆ,6.50ಕ್ಟೀಂಟಲ್ ಜೋಳ,ಐನಾಪೂರ:50ಕ್ಟೀಂಟಲ್ ಕಡಲೆ,6.50ಕ್ಟೀಂಟಲ್ ಜೋಳ ಬೀಜ ದಾಸ್ತಾನುವಿದ್ದು ವಿತರಣೆ ಮಾಡಲಾಗುತ್ತಿದೆ ರೈತರು ಸಬ್ಸಿಡಿ ದರದಲ್ಲಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬಹುದು.
:- ವೀರಶೇಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ ಚಿಂಚೋಳಿ.
