ಉದಯವಾಹಿನಿ, ಇಂಡಿಯನ್ ಪ್ರೀಮಿಯರ್ ಲೀಗ್ 2026 ಆರಂಭಕ್ಕೆ ಇನ್ನೂ ಕೆಲವು ತಿಂಗಳುಗಳು ಬಾಕಿ ಇದೆ. ಈ ನಡುವೆ ಲಕ್ಷ್ಮೀ ಸೂಪರ್ ಜೈಂಟ್ಸ್ ತಂಡ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ಮುಂದಿನ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ಲಕ್ಷೆ ಫ್ರಾಂಚೈಸಿ ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಅದರ ಭಾಗವಾಗಿ ಸೌತ್ ಆಫ್ರಿಕಾ ಟಿ20 ಲೀಗ್ ಅನ್ನು ಅಭ್ಯಾಸ ವೇದಿಕೆಯಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.
ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಲಕ್ಷ್ಮೀ ಸೂಪರ್ ಜೈಂಟ್ಸ್ ಮಾಲೀಕತ್ವದ ಡರ್ಬನ್ ಸೂಪರ್ ಜೈಂಟ್ಸ್ ತಂಡ ಕಣಕ್ಕಿಳಿಯುತ್ತಿದೆ. ಈ ತಂಡದ ಅಭ್ಯಾಸ ಶಿಬಿರದಲ್ಲಿ ಲಕ್ಕೋ ತಂಡದ ಭಾರತೀಯ ಬೌಲರ್‌ಗಳಿಗೆ ಅವಕಾಶ ನೀಡಲು ಪ್ಲಾನ್ ರೂಪಿಸಲಾಗಿದೆ. ಈ ಕುರಿತು ಬಿಸಿಸಿಐಯಿಂದ ಅಗತ್ಯ ಅನುಮತಿ ದೊರೆತಿರುವುದಾಗಿ ಮೂಲಗಳು ತಿಳಿಸಿವೆ.
ಲಕ್ಷ್ಮೀ ತಂಡದ ಅವೇಶ್ ಖಾನ್, ಮೊಕ್ಸಿನ್ ಖಾನ್, ನಮನ್ ತಿವಾರಿ ಸೇರಿದಂತೆ ಕೆಲವು ಭಾರತೀಯ ವೇಗಿಗಳು ಸೌತ್ ಆಫ್ರಿಕಾಕ್ಕೆ ತೆರಳಲಿದ್ದು, ಡರ್ಬನ್ ತಂಡದ ನೆಟ್ಸ್‌ನಲ್ಲಿ ನಿರಂತರವಾಗಿ ಬೌಲಿಂಗ್ ಅಭ್ಯಾಸ ನಡೆಸಲಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಅನುಭವ ಪಡೆಯುವುದು ಈ ಆಟಗಾರರಿಗೆ ದೊಡ್ಡ ಲಾಭವಾಗಲಿದೆ.
ಇತ್ತ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಆರು ಹೊಸ ಆಟಗಾರರನ್ನು ಸೇರಿಸಿಕೊಂಡಿರುವ ಲಕ್ಕೋ ತಂಡ, ಈ ಬಾರಿ ಸಂಪೂರ್ಣ ಸಿದ್ಧತೆಯೊಂದಿಗೆ ಕಣಕ್ಕಿಳಿಯಲು ಉತ್ಸುಕವಾಗಿದೆ. ನಾಯಕ ರಿಷಭ್ ಪಂತ್ ನೇತೃತ್ವದಲ್ಲಿ ತಂಡದಿಂದ ಭರ್ಜರಿ ಪ್ರದರ್ಶನದ ನಿರೀಕ್ಷೆ ವ್ಯಕ್ತವಾಗಿದೆ.
