ಉದಯವಾಹಿನಿ, ನವದೆಹಲಿ : ಗೇಮಿಂಗ್ ಆಪ್‌ಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಶ್ರದ್ಧಾ ಕಪೂರ್ ಸೇರಿದಂತೆ ಹಲವು ನಟ, ನಟಿಯರಿಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಅಕ್ರಮ ಬೆಟ್ಟಿಂಗ್‌ಗೆ ವೇದಿಕೆ ಒದಗಿಸಿದ ಮಹದೇವ್ ಆಪ್ ಕುರಿತು ವಿಚಾರಣೆಗೆ ಒಳಪಡುವ ತಾರೆಯರಲ್ಲಿ ಇವರೂ ಸೇರಿದ್ದಾರೆ. ರಣಬೀರ್ ಕಪೂರ್ ಹಣಕಾಸು ವಂಚನೆಗಳ ತನಿಖೆ ನಡೆಸುವ ಕೇಂದ್ರೀಯ ಸಂಸ್ಥೆಯ ಮುಂದೆ ಹಾಜರಾಗಲು ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ.ನಟಿ ಶ್ರದ್ಧಾ ಕಪೂರ್ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಾರೋ ಅಥವಾ ಸಮಯ ಕೇಳುತ್ತಾರೋ ಎನ್ನುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ. ಮಹಾದೇವ್ ಆಪ್ ಪ್ರಕರಣದಲ್ಲಿ ಹಾಸ್ಯನಟ-ನಟ ಕಪಿಲ್ ಶರ್ಮಾ ಮತ್ತು ನಟಿಯರಾದ ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರಿಗೂ ವಿವಿಧ ದಿನಾಂಕಗಳಲ್ಲಿ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರು ಕೂಡ ಏಜೆನ್ಸಿಯ ಮುಂದೆ ಹಾಜರಾಗಲು ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ ಎಂದು ಅವರು ಹೇಳಲಾಗಿದೆ.
