
ಉದಯವಾಹಿನಿ, ಮುಂಬೈ: ಕಣ್ಣಿನ ಆರೋಗ್ಯದ ಕ್ಷೇತ್ರದಲ್ಲಿ ಜಾಗತಿಕವಾಗಿ ಅಗ್ರಸ್ಥಾನದಲ್ಲಿರುವ ಮತ್ತು ಜಾನ್ಸನ್ ಮತ್ತು ಜಾನ್ಸನ್ ಮೆಡ್‌ಟೆಕ್‌ನ ಭಾಗವಾಗಿರುವ ಜಾನ್ಸನ್ ಮತ್ತು ಜಾನ್ಸನ್ ವಿಷನ್ ಇಂದು ಜೆನ್ ಜರ್ಸ್ ಮತ್ತು ಮಿಲೇನಿಯಲ್ಸ್ ಕಾಂಟ್ಯಾಕ್ಟ್ ಲೆನ್ಸ್ ಗಳ ಬಳಕೆಯನ್ನು ಉತ್ತೇಜಿಸಲು ಸೂಪರ್‌ಸ್ಟಾರ್ ರಣವೀರ್ ಸಿಂಗ್ ಅವರೊಂದಿಗೆ ಕೈಜೋಡಿಸಿದೆ. ಅಕ್ಯೂವ್ಯೂಲ ಅಭಿಯಾನದ ಉದ್ದೇಶ: ಜನರಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹೊಸ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರನ್ನು ಸ್ವಾಗತಿಸುವುದು ನಮ್ಮ ಉದ್ದೇಶವಾಗಿದೆ.
ವಿಶ್ವಾದ್ಯಂತ ಕಾಂಟ್ಯಾಕ್ಟ್ ಲೆನ್ಸ್ ಗಳ ಮಾರಾಟದಲ್ಲಿ ಅಕ್ಯೂವ್ಯೂಲ ನಂ.೧ ಬ್ರ್ಯಾಂಡ್ ಎಂಬುದನ್ನು ಒತ್ತಿಹೇಳುವುದು, ಮತ್ತು ಆ ಮೂಲಕ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಪ್ರಯತ್ನಿಸುವಂತೆ ಗ್ರಾಹಕರನ್ನು ಪ್ರೇರೇಪಿಸುವುದಾಗಿದೆ.
ಕಣ್ಣಿನ ತಪಾಸಣೆಗೆ ಮತ್ತು ಮೊದಲ ಬಾರಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಲು ಆಲೋಚಿಸಿದಾಗ ಮೊದಲಿಗೆ ಪ್ಟೋಮೆಟ್ರಿಸ್ಟ್ ಅನ್ನು ಸಂಪರ್ಕಿಸುವಂತೆ ಗ್ರಾಹಕರನ್ನು ಪ್ರೋತ್ಸಾಹಿಸುವುದು. ಕಾಂಟ್ಯಾಕ್ಟ್ ಲೆನ್ಸ್ ಗಳ ಬೆಲೆ ವಿಪರೀತ ಎಂಬ ಮಿಥ್ಯೆಯನ್ನು ಹೋಗಲಾಡಿಸಲು ಕೈಗೆಟಕುವ ಬೆಲೆಗಳ ಸಣ್ಣ ಪ್ಯಾಕೇಜುಗಳನ್ನು ಪರಿಚಯಿಸುವುದಾಗಿದೆ.
